ನ್ಯೂರ್ಯಾಕ್: ಭಾರತೀಯ ಮೂಲದ ಲೇಖಕಸಲ್ಮಾನ್ ರಶ್ದಿ ಅವರನ್ನು ಚಾಕುವಿನಿಂದ ಇರಿದಿದ್ದ ಹದಿ ಮತರ್ ಎಂಬಾತನನ್ನುಅಮೆರಿಕಪೊಲೀಸರು ಬಂಧಿಸಿದ್ದಾರೆ.
ಹದಿ ಮತರ್ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಿ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
* ಇವನು ಮ್ಯಾನ್‌ಹಟ್ಸನ್‌ನಲ್ಲಿರುವ ಫೇರ್‌ವ್ಯೂ ನಿವಾಸಿಯಾಗಿದ್ದಾನೆ.
* ‘ಶಿಯಾ ಉಗ್ರವಾದ‘ ಹಾಗೂ ಇರಾನ್ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ (ಐಆರ್‌ಜಿಸಿ) ಬಗ್ಗೆ ಸಹಾನುಭೂತಿ ಹೊಂದಿದ್ದಾನೆ ಎಂದು ಪೊಲೀಸರುಹೇಳಿದ್ದಾರೆ.
* 2020ರಲ್ಲಿಹತ್ಯೆಗೀಡಾದ ಇರಾನ್ ಕಮಾಂಡರ್ ಖಾಸಿಂ ಸೊಲೊಮನಿಫೋಟೊಗಳನ್ನು ತನ್ನ ಸ್ಮಾರ್ಟ್‌ಫೋನ್‌ನಲ್ಲಿಇಟ್ಟುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
* ಹದಿ ಮತರ್ ಒಬ್ಬನೇ ಈ ಕೆಲಸ ಮಾಡಿದ್ದಾನೆ ಎಂದಿರುವ ಪೊಲೀಸರು,ಘಟನೆ ಸ್ಥಳದಿಂದ ಒಂದು ಬ್ಯಾಗ್, ಕೆಲವು ವಿದ್ಯುನ್ಮಾನಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ.
* ಇವನ ಬಗ್ಗೆ ಕ್ರಿಮಿನಲ್ ಪ್ರಕರಣಗಳು? ಅವನ ಮೂಲ ದೇಶ? ವೃತ್ತಿ ಯಾವುದು? ಹಿನ್ನೆಲೆ ಏನುಎಂಬುದರ ಬಗ್ಗೆಪೊಲೀಸರು ತಪಾಸಣೆ ಮಾಡುತ್ತಿದ್ದಾರೆ.
*ಷಟೌಕ್ವಾ ಇನ್‌ಸ್ಟಿಟ್ಯೂಟ್‌ನ ವೇದಿಕೆ ಮೇಲೆ ರಶ್ದಿ ಭಾಷಣ ಪ್ರಾರಂಭ ಮಾಡುತ್ತಿದ್ದಂತೆ ಹದಿ ಮತರ್ ಚಾಕುವಿನಿಂದ ರಶ್ದಿ ಮೇಲೆ ದಾಳಿ ಮಾಡಿದ್ದ. ಸಿಸಿ ಕ್ಯಾಮೆರಾ ಹಾಗೂ ಸ್ಥಳೀಯರ ಸಹಾಯದಿಂದ ಪೊಲೀಸರು ಅವನನ್ನು ಬಂಧಿಸಿದ್ದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.