ADVERTISEMENT

ಕೋವಿಡ್‌: ಕಳೆದ ವಾರ 41 ಲಕ್ಷಕ್ಕೂ ಅಧಿಕ ಪ್ರಕರಣ ಪತ್ತೆ– ಡಬ್ಲ್ಯುಎಚ್‌ಒ

ಏಜೆನ್ಸೀಸ್
Published 30 ಜೂನ್ 2022, 13:39 IST
Last Updated 30 ಜೂನ್ 2022, 13:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಿನೀವಾ: ಕಳೆದ ವಾರ ವಿಶ್ವದಾದ್ಯಂತ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇಕಡ 18ರಷ್ಟು ಏರಿಕೆಯಾಗಿದ್ದು, ಜಾಗತಿಕವಾಗಿ 41 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಕುರಿತು ತನ್ನ ಇತ್ತೀಚಿನ ಸಾಪ್ತಾಹಿಕ ವರದಿಯಲ್ಲಿ, ವಿಶ್ವದಾದ್ಯಂತ ಸಾವಿನ ಸಂಖ್ಯೆಯು ಹಿಂದಿನ ವಾರಕ್ಕೆ ಹೋಲಿಸಿದರೆ ಸುಮಾರು 8,500ರಷ್ಟಿದೆ.‌ಕೋವಿಡ್‌ನಿಂದಾಗಿ ಮೃತಪಡುವವರ ಸಂಖ್ಯೆ ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಅಮೆರಿಕದಲ್ಲಿ ಹೆಚ್ಚಿದೆ ಎಂದು ತಿಳಿಸಿದೆ.

ಕೊರೊನಾ ಸೋಂಕಿನಿಂದಾಗಿ ಮಧ್ಯಪ್ರಾಚ್ಯದಲ್ಲಿ ಶೇಕಡ 47ರಷ್ಟು,ಯುರೋಪ್ ಮತ್ತು ಆಗ್ನೇಯ ಏಷ್ಯಾದಲ್ಲಿ ಶೇಕಡ 32ರಷ್ಟು ಹಾಗೂ ಅಮೆರಿಕದಲ್ಲಿ ಶೇಕಡ 14ರಷ್ಟು ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದುಡಬ್ಲ್ಯುಎಚ್‌ಒ ಹೇಳಿದೆ.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ‘ಒಮಿಕ್ರಾನ್‌ನ ರೂಪಾಂತರಿಗಳಾದ ಬಿಎ.4 ಹಾಗೂ ಬಿಎ.5 ತಳಿಗಳ ಮೂಲಕ 110 ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.