ADVERTISEMENT

ಕೋವಿಡ್‌ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್‌ ಪ್ರಯೋಗ ಇನ್ನು ಇಲ್ಲ

ಏಜೆನ್ಸೀಸ್
Published 5 ಜುಲೈ 2020, 19:30 IST
Last Updated 5 ಜುಲೈ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬರ್ಲಿನ್: ಕೋವಿಡ್‌–19ಗೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಿರುವವರ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್‌ ಬಳಕೆಯ ಪ್ರಯೋಗವನ್ನು ಕೊನೆಗೊಳಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ತಿಳಿಸಿದೆ.

ಹೈಡ್ರಾಕ್ಸಿಕ್ಲೋರೊಕ್ವಿನ್‌ ಹಾಗೂ ಎಚ್‌ಐವಿ ರೋಗಿಗಳಿಗೆ ನೀಡಲಾಗುವ ಲೊಪಿನವಿರ್‌/ರಿಟೊನವಿರ್‌ ಔಷಧಗಳನ್ನು ಕೋವಿಡ್‌ ರೋಗಿಗಳ ಮೇಲೆ ಪ್ರಯೋಗಿಸುವುದನ್ನು ಸ್ಥಗಿತಗೊಳಿಸುವಂತೆ ಈ ಪ್ರಯೋಗದ ಮೇಲ್ವಿಚಾರಣೆ ವಹಿಸಿದ್ದ ಸಮಿತಿಯು ನೀಡಿದ್ದ ಸಲಹೆಯನ್ನು ಸ್ವೀಕರಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೋವಿಡ್‌–19ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದವರ ಮೇಲೆ ಈ ಔಷಧವನ್ನೇ ಪ್ರಯೋಗಿಸಿ, ಪರಿಣಾಮಗಳ ತುಲನೆ ನಡೆಸಲಾಗುತ್ತಿತ್ತು.

ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿ, ಸಾವಿಗೀಡಾಗುವವರ ಸಂಖ್ಯೆಯಲ್ಲಿ ಈ ಔಷಧ ಬಳಕೆಯಿಂದ ಅಂಥ ವ್ಯತ್ಯಾಸವೇನೂ ಆಗಿಲ್ಲ. ಆಗಿದ್ದರೂ ತೀರಾ ಕಡಿಮೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಈ ಔಷಧಗಳು ಸ್ವಲ್ಪಮಟ್ಟಿಗೆ ಪರಿಣಾಮಕಾರಿ ಎಂಬುದು ಪ್ರಯೋಗದಿಂದ ತಿಳಿದುಬಂದಿದೆ ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ.

ADVERTISEMENT

ಸೋಂಕಿಗೆ ಒಳಗಾಗಿದ್ದರೂ ಆಸ್ಪತ್ರೆಗೆ ದಾಖಲಾಗದಿರುವವರ ಅಥವಾ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಔಷಧಗಳನ್ನು ಪ್ರಯೋಗಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.