ADVERTISEMENT

ಮಂಕಿಪಾಕ್ಸ್ ಅನ್ನು ‘ಎಂಪಾಕ್ಸ್‌’ ಎಂದು ಮರುನಾಮಕರಣ ಮಾಡಿದ ಡಬ್ಲ್ಯುಎಚ್‌ಒ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 15:44 IST
Last Updated 28 ನವೆಂಬರ್ 2022, 15:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌ (ಎಪಿ): ವರ್ಣಭೇದ ಹಾಗೂ ತಾರತಮ್ಯ ಧೋರಣೆಯ ಆರೋಪಗಳು ಕೇಳಿಬಂದ ಕಾರಣ ‘ಮಂಕಿಪಾಕ್ಸ್‌’ ಹೆಸರನ್ನು ‘ಎಂಪಾಕ್ಸ್‌’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮರುನಾಮಕರಣ ಮಾಡಿದೆ. ಮುಂದಿನ ವರ್ಷದಿಂದ ‘ಎಂಪಾಕ್ಸ್’ ಹೆಸರನ್ನು ಬಳಸುವಂತೆ ಅದು ಸೂಚಿಸಿದೆ.

ನೂರಕ್ಕೂ ಹೆಚ್ಚು ದೇಶಗಳ ಜನರಿಗೆ ‘ಮಂಕಿಪಾಕ್ಸ್’ ಹರಡಿದ್ದು, ಅದು ‘ಜನಾಂಗೀಯ ಮತ್ತು ಕಳಂಕಿತ ಭಾಷೆ’ ಎಂಬ ಆರೋಪ ಕೇಳಿ ಬಂದಿತ್ತು. ಈ ಹೆಸರನ್ನು ಬದಲಾಯಿಸುವಂತೆ ಹಲವು ಜನರು ಹಾಗೂ ಸಂಘ– ಸಂಸ್ಥೆಗಳಿಂದ ಮನವಿ ಬಂದಿದ್ದವು ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ಡೆನ್ಮಾರ್ಕ್‌ನಲ್ಲಿ ಮಂಗಗಳಲ್ಲಿ ಕಾಣಿಸಿಕೊಂಡ ಸಿಡುಬಿನಂತಹ ಕಾಯಿಲೆಗೆ 1958ರಲ್ಲಿ ‘ಮಂಕಿಪಾಕ್ಸ್’ ಎಂದು ಹೆಸರಿಸಲಾಗಿತ್ತು. ‘ಸಾರ್ಸ್‌’, ‘ಕೋವಿಡ್–19’ರಂತಹ ಹೊಸ ಸೋಂಕು ಕಾಣಿಸಿಕೊಂಡಾಗ ಕೆಲವೇ ದಿನಗಳಲ್ಲಿ ಸೂಕ್ತ ಹೆಸರನ್ನು ಡಬ್ಲ್ಯುಎಚ್‌ಒ ನೀಡಿತ್ತು. ಆದರೆಇದೇ ಮೊದಲ ಬಾರಿಗೆ ದಶಕಗಳ ಬಳಿಕೆ ಕಾಯಿಲೆಯೊಂದರ ಹೆಸರನ್ನು ಮರುನಾಮಕರಣ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.