ವುಹಾನ್, ಚೀನಾ: ವಿಶ್ವ ಆರೋಗ್ಯ ಸಂಸ್ಥೆಯ ತಂಡವುಕೊರೊನಾ ವೈರಸ್‌ನ ಮೂಲ ಪತ್ತೆ ಹಚ್ಚಲು ವುಹಾನ್‌ನ ಫುಡ್ ಮಾರ್ಕೆಟ್ ಎಂದು ಕರೆಯಲ್ಪಡುವ ಬೆಶಾಚೌ ಮಾರುಕಟ್ಟೆಗೆ ಭಾನುವಾರ ಭೇಟಿ ನೀಡಿದೆ.
ವುಹಾನ್‌ನ ಅತಿ ದೊಡ್ಡ ಆಹಾರ ಮಾರುಕಟ್ಟೆಯಲ್ಲಿ ಒಂದಾದ ಈ ಮಾರುಕಟ್ಟೆಯ ವಿವಿಧ ಭಾಗಗಳಲ್ಲಿ ಡಬ್ಲೂಎಚ್‌ಒನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅವರೊಂದಿಗೆ ಚೀನಾದ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ತಂಡವೂ ಆಗಮಿಸಿದೆ.
ಪಶುವೈದ್ಯರು, ವೈರಾಲಜಿ ತಜ್ಞರು, ಆಹಾರ ಸುರಕ್ಷತೆ ಮತ್ತು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರನ್ನೊಳಗೊಂಡ ತಂಡವು ವುಹಾನ್‌ನ ಜೀನಿಯೆಂತನ್ ಆಸ್ಪತ್ರೆ, ಹುಬೈ ಇಂಟಿಗ್ರೇಟೆಡ್ ಚೈನೀಸ್ ಮತ್ತು ವೆಸ್ಟರ್ನ್ ಮೆಡಿಸಿನ್ ಹಾಸ್ಪಿಟಲ್‌ಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಈ ವೇಳೆ ಕೋವಿಡ್–19ನ ಆರಂಭಿಕ ಇತಿಹಾಸಕ್ಕೆ ಸಂಬಂಧಿಸಿದ ಮ್ಯೂಸಿಯಂಗೂ ಅಧಿಕಾರಿಗಳು ಭೇಟಿ ನೀಡಿದ್ದರು.
ಚೀನಾದ ಆಸ್ಪತ್ರೆಗಳು, ಸೀಫುಡ್ ಮಾರುಕಟ್ಟೆ, ವುಹಾನ್‌ನ ವೈರಾಲಜಿ ಸಂಸ್ಥೆ ಮತ್ತು ಪ್ರಯೋಗಾಲಯ, ರೋಗ ನಿಯಂತ್ರಣ ಕೇಂದ್ರಕ್ಕೆ ತಂಡ ಭೇಟಿ ನೀಡುವುದಾಗಿ ಡಬ್ಲ್ಯೂಎಚ್‌ಒ ತಂಡ ಗುರುವಾರ ಟ್ವೀಟ್ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.