ಬೀಜಿಂಗ್: ಇನ್ನು ಮುಂದೆ ತಮ್ಮ ಎಲ್ಲಾ ಮಳಿಗೆಗಳಲ್ಲೂ ಭದ್ರತಾ ಕ್ರಮಗಳನ್ನು ಹೆಚ್ಚಿಸುವುದಾಗಿ ಅಂತರರಾಷ್ಟ್ರೀಯ ಗೃಹೋಪಯೋಗಿ ಮತ್ತು ಪೀಠೋಪಕರಣಗಳ ತಯಾರಿಕೆ ಕಂಪನಿ ಐಕಿಯಾ ಸೋಮವಾರಪ್ರಕಟಣೆಯಲ್ಲಿ ತಿಳಿಸಿದೆ.
ಸ್ವೀಡನ್ ಮೂಲದ ಅಂತರರಾಷ್ಟ್ರೀಯ ಐಕಿಯಾ ಕಂಪನಿ ವಿಶ್ವದ 90ಕ್ಕೂ ಹೆಚ್ಚು ದೇಶಗಳಲ್ಲಿ ಪೀಠೋಪಕರಣ ಮಳಿಗೆಗಳನ್ನು ಹೊಂದಿದೆ. ಗೃಹೋಪಯೋಗಿ ಮತ್ತು ಪೀಠೋಪಕರಣಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ.
ಇತ್ತೀಚೆಗೆ ಚೀನಾದಲ್ಲಿ ಐಕಿಯಾ ಮಳಿಗೆಯೊಂದರಲ್ಲಿ ಯುವತಿಯೊಬ್ಬರು ಸೋಫಾಗಳು ಮತ್ತು ಬೆಡ್‌ಗಳ ಮೇಲೆ ಅರೆ ನಗ್ನಳಾಗಿ ಕುಳಿತು ಹಸ್ತಮೈಥುನ ಮಾಡಿಕೊಂಡಿದ್ದರು. ಇದನ್ನು ಅಪರಿಚಿತರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಮಳಿಗೆಯಲ್ಲಿ ಗ್ರಾಹಕರು ಸುತ್ತಾಡುತ್ತಿದ್ದರೂ ಯಾವುದನ್ನು ಗಮನಿಸದೇ ಆ ಯುವತಿ ಹಸ್ತಮೈಥುನ ಮಾಡಿಕೊಂಡಿದ್ದರು.
ಯಾವುದೇ ಸೆನ್ಸಾರ್ ಇಲ್ಲದೇ ಯುವತಿಯ ಹಸ್ತಮೈಥುನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸುಮಾರು 1 ಕೋಟಿಗೂ ಹೆಚ್ಚು ಜನರು ಈ ವಿಡಿಯೊವನ್ನು ವೀಕ್ಷಣೆ ಮಾಡಿದ್ದರು. ಈ ಘಟನೆಯಿಂದ ಮುಜುಗರಗೊಂಡಿರುವ ಐಕಿಯಾ ಕಂಪನಿ ಇನ್ನು ಮುಂದೆ ನಮ್ಮ ಮಳಿಗೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವುದಾಗಿ ಹೇಳಿದೆ. ಅಲ್ಲದೇ ಸಿಸಿ ಕ್ಯಾಮೆರಾ ಹಾಗೂ ಭದ್ರತಾ ಕ್ರಮಗಳನ್ನು ಹೆಚ್ಚಿಸುವುದಾಗಿತಿಳಿಸಿದೆ. ಮಳಿಗೆಯಲ್ಲಿ ಇಂತಹಘಟನೆ ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದೆ.
ಚೀನಾದ ಯಾವ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಹಾಗೇ ಯುವತಿ ಹಾಗೂ ಅದನ್ನು ಚಿತ್ರಿಕರಿಸದವರು ಗುರುತು ಪತ್ತೆಯಾಗಿಲ್ಲ. ಆದಾಗ್ಯೂ ಘಟನೆ ಬಗ್ಗೆ ಚೀನಾ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಐಕಿಯಾ ಹೇಳಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ಅಪರಾಧ ವಿಭಾಗದ ಪೊಲೀಸರು ಇದು ಸಾಮಾಜಿಕ ಮೌಲ್ಯಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳನ್ನು ಅಪ್‌ಲೋಡ್ ಮಾಡುವವರಿಗೆ 32 ಸಾವಿರ ತಂಡ ಹಾಗೂ 15 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶ ಚೀನಾ ಕಾನೂನಿನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.