ADVERTISEMENT

14 ವರ್ಷ ಕೋಮಾದಲ್ಲಿದ್ದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದಳು!

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 10:31 IST
Last Updated 5 ಜನವರಿ 2019, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅರಿಜೋನಾ: ಹದಿನಾಲ್ಕು ವರ್ಷ ಕೋಮಾ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.ಕೋಮಾದಲ್ಲಿರುವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅರಿಜೋನಾದ ಸ್ಥಳೀಯ ಸುದ್ದಿ ವಾಹಿನಿ ಪ್ರಕಾರ ಕೋಮಾದಲ್ಲಿದ್ದ ಮಹಿಳೆ ಡಿಸೆಂಬರ್ 29ರಂದು ಮಗುವಿಗೆ ಜನ್ಮ ನೀಡಿದ್ದಾರೆ.

ಅರಿಜೋನಾದಲ್ಲಿರುವ ಚಿಕಿತ್ಸಾ ಕೇಂದ್ರವೊಂದರಲ್ಲಿ ಮಹಿಳೆ ಚಿಕಿತ್ಸೆಯಲ್ಲಿದ್ದರು. ಆದಾಗ್ಯೂ, ಮಹಿಳೆ ಮಗುವಿಗೆ ಜನ್ಮ ನೀಡುವವೆರೆಗೂ ಆಕೆ ಗರ್ಭಿಣಿಯಾಗಿದ್ದಳು ಎಂಬ ವಿಷಯ ಚಿಕಿತ್ಸಾ ಕೇಂದ್ರದವರಿಗೆ ತಿಳಿದಿರಲಿಲ್ಲ

ADVERTISEMENT

ಆ ಚಿಕಿತ್ಸಾ ಕೇಂದ್ರದಲ್ಲಿನ ನೌಕರರ ಮೇಲೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದು, ಅಲ್ಲಿನ ಪುರುಷ ನೌಕರರಡಿಎನ್‍ಎ ಪತ್ತೆ ಮಾಡಿ ಮಗುವಿನ ಅಪ್ಪ ಯಾರು ಎಂದು ತನಿಖೆ ನಡೆಸುತ್ತಿದ್ದಾರೆ.

ಸಿನಿಮಾ ಕಥೆಯನ್ನು ನೆನಪಿಸಿದ ಘಟನೆ
ಅರಿಜೋನಾದಲ್ಲಿ ನಡೆದ ಈ ಘಟನೆ ಪೆಡ್ರೊ ಅಲ್ಮೋದೊವರ್ ನಿರ್ದೇಶನದ ಟಾಕ್ ಟು ಹರ್ ಎಂಬ ಸಿನಿಮಾ ಕಥೆಗೂ ಸಾಮ್ಯತೆ ಇದೆ.ಈ ಸಿನಿಮಾದಲ್ಲಿ ನಾಯಕಿ ಕೋಮಾದಲ್ಲಿದ್ದಾಗ ಆಕೆಯ ಮೇಲೆ ಅತ್ಯಾಚಾರ ನಡೆಯುತ್ತದೆ.ಆಮೇಲೆ ಆಕೆಯ ಬದುಕು ಹೇಗೆ ಬದಲಾಗುತ್ತದೆ ಎಂಬುದು ಸಿನಿಮಾ ಕಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.