ADVERTISEMENT

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ

ಭಾರತ, ಜಪಾನ್, ರಷ್ಯಾ ಮತ್ತು ಚೀನಾ ‘ಅನ್ಯ ದೇಶ’ದ ಪ್ರಜೆಗಳನ್ನು ದ್ವೇಷಿಸುವ ರಾಷ್ಟ್ರಗಳು ಎಂಬ ಹೇಳಿಕೆ

ಪಿಟಿಐ
Published 4 ಮೇ 2024, 13:20 IST
Last Updated 4 ಮೇ 2024, 13:20 IST
<div class="paragraphs"><p>ಜೋ ಬೈಡನ್‌</p></div>

ಜೋ ಬೈಡನ್‌

   

ವಿಶ್ವಸಂಸ್ಥೆ: ಭಾರತ, ಜಪಾನ್, ರಷ್ಯಾ ಮತ್ತು ಚೀನಾ ‘ಅನ್ಯ ದೇಶ’ದ ಪ್ರಜೆಗಳನ್ನು ದ್ವೇಷಿಸುವ ರಾಷ್ಟ್ರಗಳು ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಹೇಳಿಕೆ ಬಗ್ಗೆ ಪತ್ರಿಕ್ರಿಯಿಸಲು ವಿಶ್ವಸಂಸ್ಥೆಯ ವಕ್ತಾರ ನಿರಾಕರಿಸಿದ್ದಾರೆ.

‘ಅವರು (ಬೈಡನ್) ಏನು ಹೇಳಿಕೆ ನೀಡಿದ್ದಾರೋ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರ ಡೆಪ್ಯುಟಿ ವಕ್ತಾರ ಫರ್ಹಾನ್‌ ಹಕ್‌ ಹೇಳಿದ್ದಾರೆ.

ADVERTISEMENT

‘ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಅದರ ಮೂಲ ಆಶಯಗಳು ಹಾಗೂ ವಿಶ್ವಸಂಸ್ಥೆಯ ಮಾನ ಹಕ್ಕುಗಳ ಒಪ್ಪಂದದಂತೆ ನಡೆದುಕೊಳ್ಳುವುದು ಮುಖ್ಯ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಬೈಡನ್‌, ‘ಭಾರತ, ಜಪಾನ್‌, ರಷ್ಯಾ ಮತ್ತು ಚೀನಾ ರಾಷ್ಟ್ರಗಳು ಅಮೆರಿಕದಂತೆ ವಲಸಿಗರನ್ನು ಸ್ವಾಗತಿಸುವುದಿಲ್ಲ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.