ADVERTISEMENT

ಇಸ್ರೇಲ್ ದಾಳಿ: ಅಂತರರಾಷ್ಟ್ರೀಯ ನ್ಯಾಯಾಲಯದಿಂದ ಶುಕ್ರವಾರ ಆದೇಶ

ರಾಯಿಟರ್ಸ್
Published 23 ಮೇ 2024, 14:08 IST
Last Updated 23 ಮೇ 2024, 14:08 IST
ರಫಾ ಮೇಲೆ ಇಸ್ರೇಲ್ ಬುಧವಾರ ನಡೆಸಿದ ದಾಳಿಯಲ್ಲಿ ತೀವ್ರವಾಗಿ ಹಾನಿಗೊಳಗಾದ ವಸತಿ ಕಟ್ಟಡ –ಎಎಫ್‌ಪಿ ಚಿತ್ರ
ರಫಾ ಮೇಲೆ ಇಸ್ರೇಲ್ ಬುಧವಾರ ನಡೆಸಿದ ದಾಳಿಯಲ್ಲಿ ತೀವ್ರವಾಗಿ ಹಾನಿಗೊಳಗಾದ ವಸತಿ ಕಟ್ಟಡ –ಎಎಫ್‌ಪಿ ಚಿತ್ರ   

ದಿ ಹೇಗ್: ಗಾಜಾದ ರಫಾ ನಗರದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ಸೂಚಿಸಬೇಕು ಎಂದು ಕೋರಿ ದಕ್ಷಿಣ ಆಫ್ರಿಕಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇಲ್ಲಿನ ಅಂತರರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ಶುಕ್ರವಾರ ಆದೇಶ ನೀಡಲಿದೆ.

ಇಸ್ರೇಲ್ ಸೇನೆಯು ಗಾಜಾ ಪ್ರದೇಶದ ಮೇಲೆ, ಅದರಲ್ಲೂ ಮುಖ್ಯವಾಗಿ ರಫಾ ನಗರದ ಮೇಲೆ, ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ಆದೇಶಿಸಬೇಕು ಎಂಬ ಮನವಿಯೊಂದಿಗೆ ದಕ್ಷಿಣ ಆಫ್ರಿಕಾ ಕಳೆದ ವಾರ ಅರ್ಜಿ ಸಲ್ಲಿಸಿದೆ. ಪ್ಯಾಲೆಸ್ಟೀನ್ ಜನರ ಉಳಿವಿಗಾಗಿ ಈ ಆದೇಶ ನೀಡಬೇಕು ಎಂದು ಅದು ಕೋರಿದೆ.

ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 1948ರಲ್ಲಿ ಮಾಡಿಕೊಂಡ ಒಪ್ಪಂದವನ್ನು ಇಸ್ರೇಲ್‌ ಉಲ್ಲಂಘಿಸುತ್ತಿದೆ ಎಂದು ದಕ್ಷಿಣ ಆಫ್ರಿಕಾ ಮಾಡಿರುವ ಆರೋಪವನ್ನು ಇಸ್ರೇಲ್ ಖಂಡಿಸಿದೆ. ದಕ್ಷಿಣ ಆಫ್ರಿಕಾದ ಆರೋಪವು ಜನಾಂಗೀಯ ಹತ್ಯಾಕಾಂಡಗಳನ್ನು ಅಣಕಿಸುವಂತೆ ಇದೆ ಎಂದು ಇಸ್ರೇಲ್ ಹೇಳಿದೆ.

ADVERTISEMENT

ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಇಸ್ರೇಲ್‌ ಮಂಡಿಸಿದ್ದ ಕೋರಿಕೆಯನ್ನು ನ್ಯಾಯಾಲಯವು ಈ ಹಿಂದೆ ಒಪ್ಪಿಲ್ಲ. ಅಲ್ಲದೆ, ಪ್ಯಾಲೆಸ್ಟೀನ್ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸುವ ಜನಾಂಗೀಯ ಹತ್ಯಾಕಾಂಡದ ಕೃತ್ಯಗಳನ್ನು ತಡೆಯಬೇಕು ಎಂದು ಇಸ್ರೇಲ್‌ಗೆ ಸೂಚಿಸಿದೆ. ಆದರೆ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವಂತೆ ಅದು ಆದೇಶಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.