ADVERTISEMENT

ಜಾಗತಿಕ ಆಹಾರ ಸುರಕ್ಷತಾ ದಿನ: ಉತ್ತಮ ನಾಳೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕಾಳಜಿ

ಏಜೆನ್ಸೀಸ್
Published 7 ಜೂನ್ 2021, 6:53 IST
Last Updated 7 ಜೂನ್ 2021, 6:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ಚಸಂಸ್ಥೆ: ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಅಚರಿಸಲಾಗುತ್ತದೆ. ಈ ಬಾರಿ ಉತ್ತಮ ನಾಳೆಗಾಗಿ ಇಂದು ಸುರಕ್ಷಿತ ಆಹಾರ ಎನ್ನುವ ಧ್ಯೇಯವಾಕ್ಯವನ್ನು ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ, ಜಾಗತಿಕ ಆಹಾರ ಸುರಕ್ಷತಾ ದಿನದ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ.

ಸುರಕ್ಷಿತವಲ್ಲದ ಆಹಾರದಿಂದ ಬರಬಹುದಾದ ಆಪಾಯಗಳ ಕುರಿತು ತಿಳಿವಳಿಕೆ, ಅವುಗಳನ್ನು ಪತ್ತೆಹಚ್ಚುವುದು, ಆಹಾರ ಸುರಕ್ಷತೆಗೆ ಕೊಡುಗೆ ನೀಡುವುದು, ಆರೋಗ್ಯ, ಆರ್ಥಿಕ ಸುಸ್ಥಿರತೆ, ಕೃಷಿ, ಮಾರುಕಟ್ಟೆ, ಪ್ರವಾಸೋದ್ಯಮ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಗಮನ ಸೆಳೆಯುತ್ತದೆ.

ADVERTISEMENT

ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ ಸೇವಿಸಿ ಎನ್ನುವ ಅಭಿಯಾನವನ್ನು ಈ ವರ್ಷ ಧ್ಯೇಯವಾಕ್ಯವಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದು, ಉತ್ತಮ ಮತ್ತು ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ದೀರ್ಘಾವಧಿಗೆ ಆಗುವ ಲಾಭಗಳು ಮತ್ತು ಆರೋಗ್ಯ ಪ್ರಯೋಜನಗಳ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತದೆ.

ಅಸುರಕ್ಷಿತ ಮತ್ತು ಕೃತಕ ಆಹಾರಬಳಕೆಯಿಂದ ಬರುವ ರೋಗಗಳ ಕುರಿತು ಕೂಡ ಅಧ್ಯಯನ ನಡೆಸುವ ವಿಶ್ವ ಆರೋಗ್ಯ ಸಂಸ್ಥೆ, ವಿವಿಧ‌ ಸರ್ಕಾರಗಳು, ಸಂಘಸಂಸ್ಥೆಗಳು, ಆಹಾರ ಉತ್ಪಾದಕರು ಮತ್ತು ಗ್ರಾಹಕರೊಡನೆ ಅಧ್ಯಯನ ವರದಿಯನ್ನು ಹಂಚಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.