ADVERTISEMENT

World Press Freedom Index 2024: ಭಾರತಕ್ಕೆ ಪಾಕ್‌ಗಿಂತಲೂ ಕಡಿಮೆ ರೇಟಿಂಗ್!

ಉತ್ತಮ–ಕಳಪೆ ಪತ್ರಿಕಾ ಸ್ವಾತಂತ್ರ್ಯದ ವಾತಾವರಣ ಕಲ್ಪಿಸುವ 180 ದೇಶಗಳ ಪಟ್ಟಿ: ಯಾವ ದೇಶಕ್ಕೆ ರೇಟಿಂಗ್ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮೇ 2024, 11:00 IST
Last Updated 5 ಮೇ 2024, 11:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪ್ಯಾರಿಸ್ ಮೂಲದ 'ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್‌' (RSF) ಎಂಬ ಅಂತರರಾಷ್ಟ್ರೀಯ ಎನ್‌ಜಿಒ 2024ರ World Press Freedom Index ಅನ್ನು ಬಿಡುಗಡೆ ಮಾಡಿದೆ.

ವರದಿ ಪ್ರಕಾರ ಉತ್ತಮ ಪತ್ರಿಕಾ ಸ್ವಾತಂತ್ರ್ಯದ ವಾತಾವರಣ ಕಲ್ಪಿಸುವ 180 ದೇಶಗಳಲ್ಲಿ ಭಾರತಕ್ಕೆ 159ನೇ ಸ್ಥಾನ ಲಭಿಸಿದೆ. ಪಾಕಿಸ್ತಾನಕ್ಕೆ (152) ಭಾರತಕ್ಕಿಂತಲೂ ಉತ್ತಮ ಸ್ಥಾನ ಲಭಿಸಿದೆ.

ADVERTISEMENT

ಇದೇ ವರದಿಯಲ್ಲಿ ಭಾರತಕ್ಕೆ ಕಳೆದ ವರ್ಷ 161 ನೇ ಸ್ಥಾನ ‍ಸಿಕ್ಕಿತ್ತು.

ವರದಿಯಲ್ಲಿ ಉತ್ತಮ ಪತ್ರಿಕಾ ಸ್ವಾತಂತ್ರ್ಯ ಇರುವ ನಾರ್ವೆಗೆ 1ನೇ ಸ್ಥಾನ ಲಭಿಸಿದೆ. ಡೆನ್ಮಾರ್ಕ್ ಎರಡನೇ ಸ್ಥಾನ ಹಾಗೂ ಸ್ವಿಡನ್ ಮೂರನೇ ಸ್ಥಾನ ಪಡೆದಿದೆ.

ಪೂರ್ವ ಆಫ್ರಿಕಾದ ಎರಿಟ್ರಿಯಾ ದೇಶ 180ನೇ ಸ್ಥಾನ ಪಡೆಯುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಅತ್ಯಂತ ಕೆಟ್ಟ ವಾತಾವರಣ ಇರುವ ದೇಶ ಎಂಬ ಕುಖ್ಯಾತಿಗೆ ಗುರಿಯಾಗಿದೆ.

145ರಿಂದ 180ರವರೆಗಿನ ಸ್ಥಾನಗಳನ್ನು ಪಡೆದ ದೇಶಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ರೆಡ್ ಜೋನ್ ಎಂದು RSF ಸಂಸ್ಥೆ ವಿಂಗಡಿಸಿದೆ. 1ರಿಂದ 8 ಸ್ಥಾನಗಳನ್ನು ಪಡೆದ ದೇಶಗಳನ್ನು ಗ್ರೀನ್ ಜೋನ್‌ ಎಂದು ವಿಂಗಡಿಸಲಾಗಿದೆ.

ಭಾರತ (159), ಬಾಂಗ್ಲಾದೇಶ (165), ಚೀನಾ (172), ಶ್ರೀಲಂಕಾ (150), ಪಾಕಿಸ್ತಾನ (152), ಅಪ್ಗಾನಿಸ್ತಾನ (178), ರಷ್ಯಾ (162) ರೆಡ್ ಜೋನ್‌ನಲ್ಲಿರುವ ಏಷ್ಯಾದ ಪ್ರಮುಖ ದೇಶಗಳಾಗಿವೆ.

‘ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ 2014ರಿಂದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಇಲ್ಲಿ ಮಾಧ್ಯಮಗಳು ರಾಜಕೀಯ ನಾಯಕರ, ರಾಜಕೀಯ ಪಕ್ಷಗಳ ನಿಯಂತ್ರಣದಲ್ಲಿವೆ. ಪತ್ರಿಕಾ ಸ್ವಾತಂತ್ರ್ಯ ತೀವ್ರ ಬಿಕ್ಕಟ್ಟಿನಲ್ಲಿದೆ’ ಎಂದು ವರದಿ ಹೇಳಿದೆ.

ಒಟ್ಟಾರೆಯಾಗಿ ಜಾಗತಿಕವಾಗಿ ಪತ್ರಿಕಾ ಸ್ವಾತಂತ್ರ್ಯದ ಸ್ಥಾನಮಾನ ಕುಸಿಯುತ್ತಿದ್ದು ರಾಜಕೀಯ ವ್ಯಕ್ತಿಗಳು, ರಾಜಕೀಯ ಪಕ್ಷಗಳು ಮಾಧ್ಯಮಗಳನ್ನು, ಪತ್ರಕರ್ತರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ RSF ಸಂಸ್ಥೆಯ ಕೇಂದ್ರ ಕಚೇರಿ ಇದೆ. ಪತ್ರಿಕಾ ಸ್ವಾತಂತ್ರ್ಯ ರಕ್ಷಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.

––––

ಆಧಾರ: RSF World Press Freedom Index 2024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.