ADVERTISEMENT

ಪ್ರೇಮಿಗಳ ದಿನದಂದು ನೀರಲ್ಲಿ ನಿರಂತರ 4.6 ನಿಮಿಷ ಚುಂಬಿಸಿ ವಿಶ್ವದಾಖಲೆ ಬರೆದ ಜೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2023, 14:26 IST
Last Updated 14 ಫೆಬ್ರುವರಿ 2023, 14:26 IST
   

ಮಾಲೆ (ಮಾಲ್ಡೀವ್ಸ್‌): ಬೆತ್ ನೀಲ್ (ದಕ್ಷಿಣ ಆಫ್ರಿಕಾ) ಮತ್ತು ಮೈಲ್ಸ್ ಕ್ಲೌಟಿಯರ್ (ಕೆನಡಾ) ಎಂಬ ಜೋಡಿ ನೀರೊಳಗಿನ ಚುಂಬನದ ವಿಶ್ವ ದಾಖಲೆಯನ್ನು ಮುರಿದು ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ.

ಈ ದಂಪತಿ ನೀರಿನ ಕೊಳದಲ್ಲಿ ಮುಳುಗಿ 4 ನಿಮಿಷ 6 ಸೆಕೆಂಡುಗಳ ಕಾಲ ಚುಂಬಿಸುವ ಮೂಲಕ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆ ಹೇಳಿದೆ.

ಇದಕ್ಕೂ ಮೊದಲು 13 ವರ್ಷಗಳ ಹಿಂದೆ 3 ನಿಮಿಷ 24 ಸೆಕೆಂಡುಗಳ ಅವಧಿಯ ವರೆಗೆ ಚುಂಬಿಸಿದ್ದೇ ಈ ವರೆಗಿನ ದಾಖಲೆಯಾಗಿತ್ತು. ಅದನ್ನು ಈ ದಂಪತಿ ಮುರಿದಿದ್ದಾರೆ.

ADVERTISEMENT

ಮುಳುಗು ತಜ್ಞರಾಗಿರುವ ಇಬ್ಬರೂ, ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಜೋಡಿಗೆ ನೆವ್ ಎಂಬ ಹೆಸರಿನ ಒಂದೂವರೆ ವರ್ಷದ ಮಗಳಿದ್ದಾಳೆ. ಗಿನ್ನಿಸ್‌ ದಾಖಲೆಗೆಂದೇ ಇಬ್ಬರೂ ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದರು. ಸೋಮವಾರ ಬೆಳಗ್ಗೆ 7.30ರಲ್ಲಿ ಈ ವಿಶ್ವದಾಖಲೆ ರಚನೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.