ಲಂಡನ್: ಒಂದು ಬಾಟಲಿ ಮದ್ಯದ ಬೆಲೆ ಎಷ್ಟಿರಬಹುದು? ವಿದೇಶಿ ಮದ್ಯ ಆಗಿದ್ದರೆ ಬೆಲೆ ಜಾಸ್ತಿಯೇ ಇರುತ್ತದೆ.ಆದರೆ ಎಡಿನ್‍ಬರ್ಗ್ ನಲ್ಲಿ ಬುಧವಾರ ನಡೆದ ಹರಾಜುವೊಂದರಲ್ಲಿ 60 ವರ್ಷ ಹಳೆಯ ವಿಸ್ಕಿ 848,750 ಪೌಂಡ್ (₹8,10,86,500 ಕೋಟಿ)ಗೆ ಹರಾಜಾಗಿದೆ.
60 ವರ್ಷ ಹಳೆಯ ದ ಮಕಾಲನ್ ವಲೆರಿಯೊ ಅದಾಮಿ 1926 ಎಂಬ ವಿಸ್ಕಿ ಬೊನ್ಹಾಮ್ ವಿಸ್ಕಿ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗಿದೆ. 1926ರಲ್ಲಿ ತಯಾರಿಸಲಾದ ಈ ವಿಸ್ಕಿಯನ್ನು 1986ರಲ್ಲಿ ಬಾಟಲಿಗಳಲ್ಲಿ ತುಂಬಿಸಲಾಗಿತ್ತು.ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾವಿರಗಟ್ಟಲೆ ಮದ್ಯ ಸ್ನೇಹಿಗಳು ಬಂದಿದ್ದರು.
ಇದೇ ವರ್ಷ ಮೇ ತಿಂಗಳಲ್ಲಿ ನಡೆದ ಹರಾಜಿನಲ್ಲಿ ಇದೇ ಬ್ರಾಂಡ್‍ನ ಇನ್ನೊಂದು ಬಾಟಲಿ ಎಂಟು ಲಕ್ಷಕ್ಕಿಂತ ಹೆಚ್ಚು ಪೌಂಡ್‍ಗೆ ಮಾರಾಟವಾಗಿತ್ತು.
ದ ಮಕಾಲನ್ ಎರಡು ಲೇಬಲ್‍ಗಳಲ್ಲಿ ಮಾರುಕಟ್ಟೆಗೆ ಬಂದಿತ್ತು, ವಲೆರಿಯೊ ಅದಾಮಿ ಮತ್ತು ಪೀಟರ್ ಬ್ಲಾಕ್ ಎಂಬ ಹೆಸರಿನ ಈ ಮದ್ಯದ ಬಾಟಲಿಗಳ ಒಟ್ಟು ಸಂಖ್ಯೆ 24!. 12 ಬಾಟಲಿ ಅದಾಮಿ ಲೇಬಲ್ ಮತ್ತು 12 ಬಾಟಲಿ ಬ್ಲಾಕ್ ಲೇಬಲ್ ಆಗಿತ್ತು. 12 ಅದಾಮಿ ಬಾಟಲಿಗಳಲ್ಲಿ ಇನ್ನೆಷ್ಟು ಬಾಟಲಿ ಬಾಕಿ ಇದೆ ಎಂಬುದು ಗೊತ್ತಿಲ್ಲ.
ಈ ಬಾಟಲಿಗಳಲ್ಲಿ ಒಂದುಬಾಟಲಿ 2011ರ ಜಪಾನ್ ಭೂಕಂಪವಾದಾಗ ಒಡೆದು ಹೋಗಿದೆ ಎಂದು ಹೇಳಲಾಗಿದೆ.ಬುಧವಾರ ಹರಾಜಾದ ಈ ಬಾಟಲಿದ ಮಕಾಲನ್ ಡಿಸ್ಟಿಲರಿಯಿಂದ ತಂದದ್ದಾಗಿದೆ.ಮೇ ತಿಂಗಳಲ್ಲಿ ದ ಮಕಾಲನ್ ಪೀಟರ್ ಬ್ಲಾಕ್ ಏಳೂವರೆ ಲಕ್ಷ ಪೌಂಡ್‌ಗೆ ಮಾರಾಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.