ನ್ಯೂಯಾರ್ಕ್: ಚೂರಿ ಇರಿತಕ್ಕೆ ಒಳಗಾದ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಬೆಂಬಲ ನೀಡುವ ಸೂಚಕವಾಗಿ ಇಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಲೇಖಕರು ಮತ್ತು ಸ್ನೇಹಿತರು ಒಟ್ಟಿಗೆ ಸೇರಿರಶ್ದಿ ಅವರ ಪುಸ್ತಕಗಳನ್ನು ಓದಿ ಒಗ್ಗಟ್ಟು ಪ್ರದರ್ಶಿಸಿದರು.
ಪೆಂಗ್ವಿನ್ ರ‍್ಯಾಂಡಮ್ ಹೌಸ್, ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿ ಮತ್ತು ಹೌಸ್ ಆಫ್ ಸ್ಪೀಕ್ ಈಸಿ, ಶುಕ್ರವಾರ ‘ಸ್ಟ್ಯಾಂಡ್ ವಿತ್ ಸಲ್ಮಾನ್: ಡಿಫೆಂಡ್ ದ ಫ್ರೀಡಂ ಟು ವ್ರೈಟ್’ ಕಾರ್ಯಕ್ರಮ ಆಯೋಜಿಸಿದ್ದವು.
ಈ ಕಾರ್ಯಕ್ರಮದಲ್ಲಿ ಟಿನಾ ಬ್ರೌನ್, ಕಿರಣ್ ದೇಸಾಯಿ, ಆಸಿಫ್ ಮಂಡ್ವಿ ಅನೇಕರು ಭಾಗವಹಿಸಿ ರಶ್ದಿ ಅವರು ಶೀಘ್ರ ಗುಣಮುಖರಾಗಲೆಂದು ಆಶಿಸಿದರು.
ನ್ಯೂಯಾರ್ಕ್ ಸಮೀಪದ ಷಟೌಕ್ವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಶ್ದಿ ಅವರನ್ನು ಹದಿ ಮಟರ್‌ಎಂಬಾತ ಆಗಸ್ಟ್ 13ರಂದು ಇರಿದಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.