ADVERTISEMENT

ಕೋವಿಡ್‌ ಉಲ್ಬಣ: ವುಹಾನ್‌ ಮ್ಯಾರಥಾನ್‌ ಮುಂದೂಡಿಕೆ

ಏಜೆನ್ಸೀಸ್
Published 24 ಅಕ್ಟೋಬರ್ 2021, 5:57 IST
Last Updated 24 ಅಕ್ಟೋಬರ್ 2021, 5:57 IST
.
.   

ಬೀಜಿಂಗ್‌: ಚೀನಾದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಕಾಣಿಸಿಕೊಂಡಿರುವುದರಿಂದ ಭಾನುವಾರ ವುಹಾನ್‌ನಲ್ಲಿ ನಡೆಯಬೇಕಿದ್ದ ಮ್ಯಾರಥಾನ್‌ ಅನ್ನು ಮುಂದೂಡಲಾಗಿದೆ.

2022ರ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ ಆರಂಭವಾಗಲು ಇನ್ನು 100 ದಿನಗಳಷ್ಟೇ ಬಾಕಿ ಇದ್ದು, ಆ ಸಂದರ್ಭದಲ್ಲಿ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಇರಬಾರದು ಎಂಬ ಕಟ್ಟುನಿಟ್ಟಿನ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಕಳೆದ ಕೆಲವು ದಿನಗಳಿಂದ ಎರಡಂಕಿಯ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಟಾತ್‌ ಆಗಿ ಈ ಮ್ಯಾರಥಾನ್‌ ಅನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ.

ದೇಶದಲ್ಲಿ ಭಾನುವಾರ 26 ಹೊಸ ಪ್ರಕರಣಗಳು ದಾಖಲಾಗಿವೆ.

ವುಹಾನ್‌ ಮ್ಯಾರಥಾನ್‌ನಲ್ಲಿ 26 ಸಾವಿರ ಅಥ್ಲೀಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆ ಇತ್ತು.

2022ರ ಫೆಬ್ರುವರಿ 4ರಿಂದ ಚಳಿಗಾಲದ ಒಲಿಂಪಿಕ್ಸ್‌ ಆರಂಭವಾಗಲಿದೆ. ಇದಕ್ಕೆ ಮೊದಲಾಗಿ ದೇಶದಲ್ಲಿ ಬೂಸ್ಟರ್‌ ಲಸಿಕೆ ನೀಡುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.