ಕೋಪನ್‌ಹೇಗನ್: ರಷ್ಯಾದ ಅತಿಕ್ರಮಣವನ್ನು ಎದುರಿಸಲು ಅಮೆರಿಕ ನಿರ್ಮಿತ ಎಫ್–16 ಯುದ್ಧ ವಿಮಾನಗಳನ್ನು ನೀಡಲು ಒಪ್ಪಿಗೆ ಸೂಚಿಸಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾದ ಅತಿಕ್ರಮಣವು ಯಶಸ್ವಿಯಾದರೆ ಯೂರೋಪ್‌ನ ಇತರ ಪ್ರದೇಶಗಳಿಗೂ ಭೀತಿ ಎದುರಾಗಬಹುದು ಎಂದು ಝೆಲೆನ್‌ಸ್ಕಿ ಪ್ರತಿಪಾದಿಸಿದ್ದಾರೆ.
ಎಫ್–16 ಯುದ್ಧ ವಿಮಾನಗಳನ್ನು ನೀಡುವಂತೆ ಉಕ್ರೇನ್ ತನ್ನ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳಿಗೆ ಒತ್ತಾಯಿಸಿತ್ತು. ಈ ವರ್ಷಾಂತ್ಯಕ್ಕೆ ಉಕ್ರೇನ್‌ಗೆ ಎಫ್–16 ಯುದ್ಧ ವಿಮಾನಗಳನ್ನು ನೀಡಲಾಗುವುದು ಎಂದು ಡೆನ್ಮಾರ್ಕ್ ಮತ್ತು ನೆದರ್ಲೆಂಡ್ ಈಚೆಗೆ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.