ಮನೆಯ ಒಳಾಂಗಣ ವಿಷಯದಲ್ಲಿ ಸಣ್ಣ ವಸ್ತುಗಳಿಗೂ ವಿಶೇಷ ಪ್ರಧಾನ್ಯ ನೀಡುವ ಕಾಲವಿದು. ಹೀಗಿರುವಾಗ ಮೇಜುಗಳನ್ನು ಮರೆತರೆ ಹೇಗೆ. ಬೆಳಿಗ್ಗೆ, ಸಂಜೆಯ ಕಾಫಿ, ಟೀ ಹೀರುವ ಸಮಯಕ್ಕೆ ಮೆರುಗು ತುಂಬಲು ಆಕರ್ಷಕವಾದ ಮೇಜುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕಲಾತ್ಮಕ ಸ್ಪರ್ಶದ ಜೊತೆಗೆ ಐಷಾರಾಮಿ ಎನಿಸುವಂತಹ ಮೇಜುಗಳು ಕಣ್ಸೆಳೆಯುತ್ತವೆ.
ಹೊಸ ಬಗೆಯ ಮೇಜು: ಕಾಫಿ, ಟೀ ಮೇಜಿಗೆ ಸಾಂಪ್ರದಾಯಿಕ ಸ್ಪರ್ಶ ನೀಡಲು ಇದು ಉತ್ತಮ ಆಯ್ಕೆಬಲ್ಲದು. ಮರದ ದಿಣ್ಣೆಯ ರೀತಿ ಕಾಣುವ ಇದು, ಬಹುಜನರ ಮೆಚ್ಚುಗೆ ಗಳಿಸಿದೆ. ಬೆಲೆ: ₹2,350 ಲಭ್ಯ: www.amazon.in
ಬಹೂಪಯೋಗಿ ಮೇಜು: ಮನೆಯ ಸ್ಥಳ ಚಿಕ್ಕದಾಗಿದ್ದರೆ ಇದು ಉಪಯೋಗಕ್ಕೆ ಬರುತ್ತದೆ. ಇದರಲ್ಲಿ ವಸ್ತುಗಳನ್ನು ಇಡಲು ಸ್ಥಳ ಸಿಗುವುದರಿಂದ ಒಂದೇ ಮೇಜನ್ನು ಹಲವು ಅವಶ್ಯಕತೆಗೆ ಬಳಸಿಕೊಳ್ಳಬಹುದು. ಟೀ, ಕಾಫಿ ಮೇಲಿಟ್ಟರೆ, ಕೆಳಗೆ ಪುಸ್ತಕ ಸೇರಿದಂತೆ ಇನ್ನಿತರ ದಿನಪತ್ರಿಕೆಗಳನ್ನು ಇರಿಸಬಹುದು. ಬೆಲೆ: ₹3,499 ಲಭ್ಯ: www.flipkart.com
ಇದು ಪಾರ್ಟಿಗಾಗಿ: ಹಲವರು ಒಟ್ಟಿಗೆ ಕೂತು ಕಾಫಿಯ ಮಜಾ ಸವಿಯುವ ಆಸೆಯುಳ್ಳವರಿಗೆ ಈ ಮೇಜು ಒಳ್ಳೆಯ ಆಯ್ಕೆ. ಮೇಜಿನ ಜೊತೆಗೆ ನಾಲ್ಕು ಕುರ್ಚಿಯೂ ಲಭ್ಯವಿದೆ. ಮನೆ ದೊಡ್ಡದಾಗಿದ್ದರೆ ಮಾತ್ರವೇ ಇದನ್ನು ಆರಿಸಿಕೊಳ್ಳಿ. ಬೆಲೆ: ₹32,199, ಲಭ್ಯ: www.woodenstreet.com
ದುಂಡನೆಯ ಮೇಜು: ಮರದ ಈ ದುಂಡನೆಯ ಮೇಜು ನವೀನ ಮಾದರಿಯಲ್ಲಿದೆ. ಡೈನಿಂಗ್ ರೂಂನಲ್ಲಿ ಇದನ್ನು ಇರಿಸಬಹುದು. ಇದರ ಮೇಲೆ ಹಣ್ಣುಗಳು, ಗ್ಲಾಸ್‌ಗಳನ್ನು ಇಡಬಹುದು. ಬೆಲೆ: ₹3,696 ಲಭ್ಯ: www.smapdeal.com
ಐಷಾರಾಮಿ ನೋಟ: ಐಷಾರಾಮಿ ಮನೆಗಳಿಗೆ ಹೇಳಿಮಾಡಿಸಿದಂತಿರುವ ಈ ಮೇಜಿನ ಬೆಲೆ ದುಬಾರಿ. ಆದರೆ ಒಳಾಂಗಣ ಅಲಂಕಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವವರಿಗೆ ಇಷ್ಟವಾಗುತ್ತದೆ. ಬೆಲೆ: ₹26,598. ಲಭ್ಯ: www.stitchwood.com
ಕುದುರೆಯ ಮೆರುಗು: ಮೇಜಿನ ವಿನ್ಯಾಸದ ಆವಿಷ್ಕಾರದಲ್ಲಿ ಇದೂ ಒಂದು. ಮಕ್ಕಳನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಬೆಲೆ: ₹7,399 ಲಭ್ಯ: www.pepperfry.com
ಚಿಕ್ಕದಾದರೂ, ನೋಡಲು ಚಂದ: ಮನೆಯ ಹಜಾರದಲ್ಲಿ ಇದನ್ನು ಇರಿಸಬಹುದು. ಸೋಫಾ ಸೆಟ್‌ನ ಮಧ್ಯೆ ಇದನ್ನು ಇರಿಸಬೇಕು. ಡ್ರಾಯರ್ ಇರುವುದರಿಂದ ಅದರೊಳಗೆ ತಕ್ಷಣಕ್ಕೆ ಕೈಗೆ ಸಿಗುವಂತಹ ವಸ್ತುಗಳನ್ನು ಇರಿಸಬಹುದು. ಬೆಲೆ: ₹12,999. www.urbandladder.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.