2014ರಲ್ಲಿ ತೆರೆಕಂಡ ಸೂಪರ್ ಹಿಟ್ ಚಲನಚಿತ್ರ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು.
ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ಮತ್ತು ಸೈಮಾ ಅವಾರ್ಡ್ ಗಳಿಸಿದ್ದ ಈ ಸಿನಿಮಾದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿದ್ದವು, 2016ರಲ್ಲಿ ಇದೇ ಚಿತ್ರ ಮಿಸ್ಟರ್ ಆ್ಯಂಡ್ ಮಿಸೆಸ್ ಸದಾಚಾರಿ ಎಂಬ ಹೆಸರಿನಲ್ಲಿ ರಿಮೇಕ್ ಆಗಿದೆ.
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದ 'ಅಣ್ತಮ್ಮಾ' ಯುವಕರಲ್ಲಿ ಕ್ರೇಜ್ ಹುಟ್ಟಿಸಿತ್ತು. ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿ ಬಂದ ಹಾಡನ್ನು ಯಶ್ ಹಾಡಿದ್ದು, ಈ ಹಾಡಿನ ವಿಶೇಷತೆ.
ಅಂದಹಾಗೆ ನಾವಿಲ್ಲಿ ಹೇಳಲು ಹೊರಟಿರುವುದು ಈ ಚಿತ್ರದ ಟೈಟಲ್ ಸಾಂಗ್ ಬಗ್ಗೆ. 'ಚೋರಿ ಹಿಂದೆ ಹೊಂಟು ಬಿಟ್ಟ ಲೆಫ್ಟು ರೈಟು ಚಾರಿ' ಎಂದು ಆರಂಭವಾಗುವ ಹಾಡನ್ನು ಹಾಡಿದ್ದು ಗಾಯಕ ಟಿಪ್ಪು. ಈ ಹಾಡಿಗೂ ಪವನ್ ಕಲ್ಯಾಣ್ ಅಭಿನಯದ ಗಬ್ಬರ್ ಸಿಂಗ್ (ತೆಲುಗು) ಚಿತ್ರದ ಹಾಡಿಗೂ ಸಾಮ್ಯತೆ ಇದೆ. ಭಾಷೆ ಬೇರೆ ಆಗಿದ್ದರೂ ಗಬ್ಬರ್ ಸಿಂಗ್ ಚಿತ್ರದ ಆ ಹಾಡಿನ ಆರಂಭದ ಬೀಟ್ಸ್ ಕೇಳಿದರೆ ಮಿ&ಮಿಸೆಸ್ ರಾಮಾಚಾರಿ ಹಾಡಿಗೆ ಹೋಲಿಕೆ ಇರುವುದು ಕಾಣಿಸುತ್ತದೆ.
ಚಿತ್ರ: ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಹಾಡು: ಚೋರಿ ಹಿಂದೆ ಹೊಂಟು ಬಿಟ್ಟ
ಗಾಯಕ: ಟಿಪ್ಪು
ಸಂಗೀತ ನಿರ್ದೇಶನ: ವಿ. ಹರಿಕೃಷ್ಣ
ಸಾಮ್ಯತೆ
ಚಿತ್ರ: ಗಬ್ಬರ್ ಸಿಂಗ್ (ತೆಲುಗು)
ಹಾಡು: ಪಿಲ್ಲ ನವ್ವುಲೇನಿ ಜೀವಿತಂ
ಸಂಗೀತ ನಿರ್ದೇಶನ: ದೇವಿ ಶ್ರೀ ಪ್ರಸಾದ್
[related]
ಬೇರೆ ಭಾಷೆಯಿಂದ ಸ್ಫೂರ್ತಿ ಪಡೆದ ಕನ್ನಡ ಚಿತ್ರಗೀತೆಗಳ ಬಗ್ಗೆ ನಿಮಗೆ ತಿಳಿದಿದ್ದರೆ, ಕಾಮೆಂಟ್ ಮಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.