ಬಳ್ಳಾರಿ: ಗಣಿನಾಡು ಸಂಡೂರಿನಲ್ಲಿ ಲೋಕಸಭೆ ಉಪಚುನಾವಣೆಯ ಅಂಗವಾಗಿ ಕಾಂಗ್ರೆಸ್ ಏರ್ಪಡಿಸಿದ್ದ ಪ್ರಚಾರ ಕಾರ್ಯಕ್ರಮ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಿಜೆಪಿಯನ್ನು, ರೆಡ್ಡಿ ಸಹೋದರರು ಹಾಗೂ ಶಾಸಕ ಬಿ. ಶ್ರೀರಾಮುಲು ಅವರನ್ನು ಅತ್ಯುಗ್ರವಾಗಿ ಟೀಕಿಸುತ್ತಿದ್ದರು.
‘ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಅಕ್ರಮ ಗಣಿಗಾರಿಕೆಯ ಪರಿಶೀಲನೆಗೆ ನಾನು ಸಂಡೂರಿನರಾಮಗಡಕ್ಕೆ ಬಂದಾಗ, ಬಿಜೆಪಿಯವರು ಗೂಂಡಾಗಳನ್ನು ಕಳಿಸಿದ್ದರು. ಆ ವ್ಯವಸ್ಥೆಯನ್ನು ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ರಿಪಬ್ಲಿಕ್ ಆಫ್ ಬಳ್ಳಾರಿ ಎಂದುಕರೆದಿದ್ದರು...’ ಹೀಗೆ ಸಿದ್ದರಾಮಯ್ಯ ತಮ್ಮದೇ ಲಹರಿಯಲ್ಲಿ ಮಾತನ್ನು ಮಥಿಸುತ್ತಿದ್ದರು. ಅವರ ಮಾತಿನ ನಡುವೆಯೇ ಸಂಡೂರು ಶಾಸಕ ಈ. ತುಕಾರಾಂ ಅವರ ಬೆಂಬಲಿಗರು, ‘ನಮ್ಮ ಶಾಸಕರಿಗೆ ಸಚಿವ ಸ್ಥಾನ ಕೊಡಿ. ಜಿಲ್ಲಾ ಉಸ್ತುವಾರಿಯ ಹೊಣೆ ಕೊಡಿ’ ಎಂದು ಕೂಗಿದರು.
ಇದರಿಂದ ಕ್ಷಣಕಾಲ ಕ್ರುದ್ಧರಾದ ಸಿದ್ದರಾಮಯ್ಯ, ‘ಮೊದಲು ನಮ್ಮ ಉಗ್ರಪ್ಪನವರಿಗೆ ಓಟ್ ಹಾಕ್ರೀ. ಅದನ್ನೆಲ್ಲ ಆಮೇಲೆ ನೋಡೋಣ’ ಎಂದು ಹೇಳಿ ಮಾತು ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.