ADVERTISEMENT

ನನ್ನನ್ನೇ ಸಾರ್‌ ಎನ್ನಬೇಡಿ ಎಂದರೆ...

ಕೆ.ನರಸಿಂಹ ಮೂರ್ತಿ
Published 8 ಡಿಸೆಂಬರ್ 2018, 20:00 IST
Last Updated 8 ಡಿಸೆಂಬರ್ 2018, 20:00 IST

ಬಳ್ಳಾರಿ: ಕನಕ ಜಯಂತಿ ಉದ್ಘಾಟನಾ ಸಮಾರಂಭ. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ವಿ.ಎಸ್‌. ಉಗ್ರಪ್ಪ, ತಮ್ಮ ಭಾಷಣದ ಆರಂಭದಲ್ಲಿ ‘ವೇದಿಕೆಯಲ್ಲಿರುವ ಗಣ್ಯರಾದ...’ ಎಂದು ಎಲ್ಲರ ಹೆಸರನ್ನೂ ಹೇಳಲಾರಂಭಿಸಿದ್ದರು.

ವೇದಿಕೆಯಲ್ಲಿ ಶಾಸಕರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ, ಪಾಲಿಕೆಯ ನಾಲ್ವರು ಸದಸ್ಯರು, ಕುರುಬರ ಸಂಘದ ಅಧ್ಯಕ್ಷ, ವಿಶೇಷ ಉಪನ್ಯಾಸಕರು, ಅಧಿಕಾರಿಗಳು ಸೇರಿ ಹನ್ನೊಂದು ಮಂದಿ ಇದ್ದರು.

ಹೆಸರುಗಳ ಉಲ್ಲೇಖ ಮುಗಿದು ಇನ್ನೇನು ಸಂಸದರು ಭಾಷಣಕ್ಕೆ ಮುಂದಾಗಬೇಕು ಎನ್ನುವಷ್ಟರಲ್ಲೇ ವೇದಿಕೆಯಲ್ಲಿದ್ದ ಕೆಲವರು ಆಕ್ಷೇಪಣೆ ದನಿಯಲ್ಲಿ ‘ಎ.ಸಿ. ಸಾರ್‌ ಇದ್ದಾರೆ, ಎ.ಸಿ. ಸಾರ್‌ ಇದ್ದಾರೆ...’ ಎಂದು ಉಗ್ರಪ್ಪನವರ ಗಮನ ಸೆಳೆದರು.

ADVERTISEMENT

ಸಭಿಕರೆಡೆಗೆ ಮುಖ ಮಾಡಿದ್ದ ಉಗ್ರಪ್ಪ ಗಣ್ಯರ ಕಡೆಗೆ ಒಮ್ಮೆ ತಿರುಗಿ ನೋಡಿದಂತೆ ಮಾಡಿ, ‘ನಾನು ಸಂಸದ. ನನ್ನನ್ನೇ ಸಾರ್ ಅನ್ನಬೇಡಿ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ನೀವು ಎ.ಸಿ. ಯವರನ್ನೂ ‘ಸಾರ್’ ಎನ್ನುತ್ತೀರಿ. ಯಾರು ಸರ್ಕಾರದ ನಿಜವಾದ ಸೇವಕರಾಗಿರುತ್ತಾರೋ ಅವರು ಎಂದಿಗೂ ಏನನ್ನೂ ಬಯಸುವುದಿಲ್ಲ’ ಎಂದು ತಮ್ಮ ಮಾತು ಮುಂದುವರಿಸಿದರು.

ಎ.ಸಿ. ರಮೇಶ ಕೋನರೆಡ್ಡಿ ಅವರು ಹಸನ್ಮುಖರಾಗಿ ಸಂಸದರ ಮಾತನ್ನು ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.