ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಚೊಚ್ಚಿನ ಬಜೆಟ್‘ಮೋದಿ ಸರ್ಕಾರ್’ ಎರಡನೇ ಆವೃತ್ತಿ ಮುಂದಿನ ಐದು ವರ್ಷಗಳಲ್ಲಿ ಹೇಗಿರುತ್ತೆ ಎಂಬುದರ ಮುನ್ನುಡಿ ಎಂದೇ ವಿಶ್ಲೇಷಿಸಲಾಗುತ್ತಿತ್ತು.‘ಪ್ರಜಾವಾಣಿ’ ಫೇಸ್‌ಬುಕ್ ಲೈವ್ ಸಂವಾದದಲ್ಲಿ ತೆರಿಗೆ ಸಲಹೆಗಾರ ಆರ್.ಜಿ.ಮುರಳೀಧರಮತ್ತು ‘ಪ್ರಜಾವಾಣಿ’ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕೇಶವ ಜಿ. ಝಿಂಗಾಡೆ ಹಂಚಿಕೊಂಡ ಪ್ರಮುಖ ಅಂಶಗಳು ಇಲ್ಲಿವೆ....
ಬಜೆಟ್ ಅಂದಮೇಲೆ ಸಾಮಾನ್ಯವಾಗಿ ನಿರೀಕ್ಷೆಗಳು ಹೆಚ್ಚೇ ಇರುತ್ತವೆ. ಚಿನ್ನದ ದರ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚಿನ್ನದ ದರ ಹೆಚ್ಚಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಅವರು ಜಾಣತನದಿಂದ ಮಾತನಾಡಿದರು. ಅವರ ಬಜೆಟ್ ಭಾಷಣದಲ್ಲಿ ಆರ್ಥಿಕ ತಿಳಿವಳಿಕೆ,ಮಾಹಿತಿ ಹೆಚ್ಚು ಇರಲಿಲ್ಲ. ಹೊರ ಹರಿವಿನ (ಖರ್ಚು) ಬಗ್ಗೆ ಸಾಕಷ್ಟು ವಿವರ ಕೊಟ್ಟಿದ್ದಾರೆ. ಒಳ ಹರಿವಿನ ಮೂಲ ಎನಿಸಿದ (ಆದಾಯ) ತೆರಿಗೆಯನ್ನು ಹೇಗೆ ಸಂಗ್ರಹಿಸುತ್ತೇವೆ ಎಂಬ ಮಾಹಿತಿ ನೀಡಿಲ್ಲ. ಶೇ 100ರಷ್ಟು ನೋಂದಣಿ ಆಗಬೇಕಿದ್ದ ಜಿಎಸ್‌ಟಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.
ಬಜೆಟ್‌ನ ಸಮಗ್ರ ಮಾಹಿತಿಗೆhttps://www.prajavani.net/budget-2019ಲಿಂಕ್ ಕ್ಲಿಕ್ ಮಾಡಿ
ಬಜೆಟ್ ಮಂಡನೆಯ ಮೊದಲ ವರ್ಷದ ಅವಕಾಶವನ್ನು ನಿರ್ಮಲಾ ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಸ್ವಾಗತಾರ್ಹವಾದ ವಿಷಯಗಳು ಖರ್ಚಿನಲ್ಲಿ ಹೆಚ್ಚಿವೆ. ಆದರೆ, ಕ್ರೋಢೀಕರಣದಮೇಲಿನ ವಿಷಯಗಳು ಸಮಾಧಾನ ತಂದಿಲ್ಲ.
ಸಂಪನ್ಮೂಲ ಕ್ರೋಢೀಕರಣವೇ ಒಂದು ಪ್ರಶ್ನೆಯಾಗುತ್ತದೆ. ಈಗ ಸಾಧನೆ ವಿಚಾರನೋಡೋಣ. ಕಾರ್ಯಕ್ರಮಗಳ ಘೋಷಣೆಗಳುಪ್ರಧಾನ ಮಂತ್ರಿ ಹೆಸರಲ್ಲಿವೆ. ಇವು ಹಿಂದೆಯೇ ಇದ್ದವು. ಮೇಕ್ ಇನ್ ಇಂಡಿಯಾ ಬಗ್ಗೆ ಪರಿಶೀಲಿಸಲು, ಹೊರಗೆ (ರಫ್ತು) ಹೋದ ಯಂತ್ರಗಳು ಎಷ್ಟು? ಒಳಗೆ (ಆಮದು) ಬಂದ ಯಂತ್ರಗಳು ಎಷ್ಟು? ಅಂಕಿಅಂಶಗಳನ್ನು ವಿವರವಾಗಿ ನೋಡಬೇಕಿದೆ.
ವರ್ತಮಾನ ಕಾಲದಲ್ಲಿ ಹಣ ಕ್ರೋಡೀಕರಣಕ್ಕೆ ಏನು ಮಾಡಿದ್ದೀವಿ? ಜನ ಸಾಮಾನ್ಯರ ಕೊಳ್ಳುವ ಸಾಮರ್ಥ್ಯ ಹೆಚ್ಚು ಮಾಡುವ ಯಾವುದೇ ಪ್ರಯತ್ನ ಆಗಿಲ್ಲ. ಇಂಧನದ ಮೇಲೆ₹1 ಸೆಸ್‌ನಿಂದ ಏನಾಗುತ್ತೆ ನೋಡಬೇಕು. ₹5 ಲಕ್ಷ ವರೆಗಿನ ಆದಾಯ ತೆರಿಗೆ ರಿಯಾಯ್ತಿಯಿಂದ ಹೆಚ್ಚೇನು ಪ್ರಯೋಜನ ಆಗಲ್ಲ. 12.38 ದಶಲಕ್ಷ ಗೃಹಗಳು ಕೊಳ್ಳುವವರಿಲ್ಲದೆ ಖಾಲಿ ಬಿದ್ದಿವೆ. ರಿಯಲ್ ಎಸ್ಟೇಟ್‌ನವರು ಬೆಲೆ ಕಡಿಮೆ ಮಾಡಲ್ಲ. ನಾವು ನೋಟು ರದ್ದತಿಯಿಂದ ಅವರಿಗೆ ಬರುತ್ತಿದ್ದ ಒಂದು ಹರಿವಿನ ವಿಚಾರ ತಡೆಗಟ್ಟಿದ್ದೀವಿ ಎಲ್ಲರಿಗೂ ಗೊತ್ತಿತ್ತು. ಅರ್ಧರಿಯಲ್ ಎಸ್ಟೇಟ್ ಬ್ಲಾಕ್ ಮನಿಯಲ್ಲೇ ನಡೀತಿತ್ತು. ಆದರೆ, ಅದಕ್ಕೆ ಪರ್ಯಾಯ ಕ್ರಮ ಕೈಗೊಳ್ಳಬೇಕಿತ್ತು.
ಬಜೆಟ್ ನಂತರ ಎಷ್ಟುಟ್ಯಾಕ್ಸ್ ಕಟ್ಟಬೇಕು?http://bit.ly/30esPwkಲಿಂಕ್ ಕ್ಲಿಕ್ ಮಾಡಿ, ಲೆಕ್ಕಹಾಕಿ
ಕಾರು ತಗೊಬೇಕು ಅಂದ್ರೆ 7–8 ಪರ್ಸೆಂಬಟ್ ಬಡ್ಡಿ. ಎಸ್‌ಎಂಇ (ಸಣ್ಣ ಮತ್ತು ಮಧ್ಯಮ ಉದ್ಯಮ)ಅಂದ್ರೆ 11 ಪರ್ಸೆಂಟ್ ಬಡ್ಡಿ ಕೊಡಬೇಕು. ಪಿಂಚಣಿ ಸೌಲಭ್ಯ ಘೋಷಣೆ ಮಾಡಿರೋದುಭವಿಷ್ಯದ ದೃಷ್ಟಿಯಿಂದ ಒಳ್ಳೇದು. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಬೇಕು.
ವೈಮಾನಿಕ ಕ್ಷೇತ್ರಕ್ಕೆ ಹೊಸ ಜೀವ ನೀಡಲು ಆರಂಭಿಸಲು ಉದ್ದೇಶಿಸಿರುವಏವಿಯಾನಿಕ್ಸ್ ಫೈನಾನ್ಸ್ ಕಾರ್ಪೊರೇಷನ್ಪರಿಣಾಮ ಚೆನ್ನಾಗಿಯೇ ಇರುತ್ತೆ. ಸಂಕಷ್ಟದಲ್ಲಿರುವ ಹಳೆಯ ಕಂಪನಿಗಳನ್ನು ರಿಪೇರಿ ಮಾಡುವುದಾ?ಹೊಸದಾಗಿ ಬರುವ ಕಂಪನಿಗಳಿಗೆ ಅನುಕೂಲ ಮಾಡಿಕೊಡುವುದಾಎನ್ನುವ ಗೊಂದಲ ನಮ್ಮಲ್ಲಿ ಇದೆ. ವಿದೇಶಿ ಬಂಡವಾಳ ಹೂಡಿಕೆಯಿಂದ ಲಾಭವೇ ಆಗುತ್ತೆ ಎನ್ನಲು ಆಗುವುದಿಲ್ಲ.ಎಲ್ಲಿಯವರೆಗೆ ನಾವು ಹಣ ತರ್ತೀವೋ ಅಲ್ಲೀವರೆಗೆ ಬಡ್ಡಿ ಥರ ಲಾಭ ಅವರಿಗೆ ಹೋಗಲೇಬೇಕು. ‘ಮುದ್ರಾ’ ಯೋಜನೆಯಡಿ ಹೆಚ್ಚಿನ ಅನುದಾನ ನೀಡಲು ಕ್ರಮ ಕೈಗೊಂಡಿರುವುದು ಉತ್ತಮ ಬೆಳವಣಿಗೆ.
ಇದುಮುಂದಿನ ಐದು ವರ್ಷಗಳ ಸೂಚ್ಯಂಕ. ಆರ್ಥಿಕ ಸುಧಾರಣೆ ಕಾರ್ಯಕ್ರಮಗಳನ್ನು ನಾಲ್ಕು ವರ್ಷ ಸತತವಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಇದನ್ನು ಅತ್ಯುತ್ತಮ ಬಜೆಟ್ ಎನ್ನಬಹುದು. ಪ್ರಸಕ್ತ ವರ್ಷ ಹಣ ಕ್ರೋಢೀಕರಣಕ್ಕೆ ಏನು ಮಾಡಿದ್ದೇವೆ ಎಂಬುದು ಮುಖ್ಯ. ಅದು ಈವರೆಗೆ ಸರಿಯಾಗಿ ಗೊತ್ತಾಗಿಲ್ಲ.
ಜನ ಸಾಮಾನ್ಯರಿಗೆ ಏನು ಸಿಕ್ಕಿದೆ:ಜನ ಸಾಮಾನ್ಯರಖರೀದಿಸುವ ಸಾಮರ್ಥ್ಯ ಹೆಚ್ಚಾಗಬೇಕು.ಆದರೆ ಅಂಥ ಯಾವುದೇ ಘೋಷಣೆಗಳು ಈ ಬಜೆಟ್‌ನಲ್ಲಿ ಇಲ್ಲ. ತೆರಿಗೆ ವಿನಾಯ್ತಿ ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಳ ಮಾಡಿದ್ದರಿಂದ ಎಷ್ಟು ಲಾಭವಾಗಿದೆ ಎನ್ನುವುದು ಸದ್ಯಕ್ಕೆ ಗೊತ್ತಾಗುವುದಿಲ್ಲ. ಇಂಧನದ ಮೇಲೆ ₹1ರ ಸೆಸ್‌ಹೆಚ್ಚಳದಿಂದ ಯಾವೆಲ್ಲಾಬೆಲೆಗಳು ಹೆಚ್ಚಲಿವೆಎಂಬುದನ್ನು ನೋಡಬೇಕಾಗುತ್ತದೆ.
ರೈತರಿಗೆ ಏನು ಸಿಕ್ತು: ಬಜೆಟ್‌ನಲ್ಲಿಶೇ60ರಷ್ಟು ರೈತರನ್ನು ನಿರ್ಲಕ್ಷ್ಯ ಮಾಡಲಾಗಿದೆ. ರೈತರು ವ್ಯವಸ್ಥಿತವಾಗಿ ತಮ್ಮ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತರುವುದಿಲ್ಲ. ಅದನ್ನು ಸರ್ಕಾರ ನಿರೀಕ್ಷಿಸಲೂಬಾರದು. ಸ್ವಾಮಿನಾಥನ್ ಸಮಿತಿ ಶಿಫಾರಸುಗಳನ್ನು ಅನುಷ್ಠಾನ ಮಾಡುವುದಾಗಿ ಸರ್ಕಾರ ಹೇಳಿತ್ತು. ಅದರ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ.ಸ್ವಾಮಿನಾಥನ್ ಅವರ ವರದಿ ಯಥಾವತ್ ಅನುಷ್ಠಾನ ಅಸಾಧ್ಯ.
ರೈತರ ಉತ್ಪನ್ನಗಳಮೌಲ್ಯವರ್ಧನೆ ಆಗುತ್ತಿಲ್ಲ. ತರಕಾರಿಗಳ ಬೆಲೆ ಹೆಚ್ಚುತ್ತಿವೆ. ಕೊತ್ತಂಬರಿ ಸೊಪ್ಪು ₹80 ವರೆಗೆ ತಲುಪಿದೆ. ಆದರೆ, ಆ ಹಣ ರೈತರಿಗೆ ತಲುಪಿತಾ ಎಂಬ ಪ್ರಶ್ನೆ ಇದೆ. ಅದು ರೈತರಿಗೆ ತಲುಪುವಂತೆ ಮಾಡಲು ಕ್ರಮ ಕೈಗೊಳ್ಳಬೇಕು.ರೈತರುಕೃಷಿಗೆ ಮಾಡುತ್ತಿರುವವೆಚ್ಚ ಕಡಿಮೆ ಆಗಿಲ್ಲ. ಆದರೆ ಅವರ ಶ್ರಮ ಮತ್ತು ಹೂಡಿಕೆಗೆ ತಕ್ಕಷ್ಟು ಪ್ರತಿಫಲವೂ ಸಿಗುತ್ತಿಲ್ಲ.
ಮೊದಲ ಮಹಿಳಾ ಹಣಕಾಸು ಸಚಿವೆ:ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ. ಮಹಿಳೆಯರ ಬೇಡಿಕೆಗಳಿಗೆ ಅವರು ಎಷ್ಟರಮಟ್ಟಿಗೆ ಸ್ಪಂದಿಸಿದರು ಎಂಬುದನ್ನು ಗಮನಿಸಬೇಕಾಗುತ್ತೆ.ಬ್ಯೂಟಿ ಪಾರ್ಲರ್ ಮತ್ತು ವ್ಯಾಪಾರ ಮಾಡಲು ಆಸಕ್ತ ಗ್ರಾಮೀಣ ಮಹಿಳೆಯರಿಗೆ ಉತ್ತೇಜನ ನೀಡಿದ್ದಾರೆ. ನಿರುದ್ಯೋಗಿಗಳಿಗೆ ಸ್ವ ಸಹಾಯ ಗುಂಪುಗಳಿಗೆ ಅನುಕೂಲ ಆಗಲಿದೆ. ಸುಳ್ಳು ಹೇಳಿ ವಿದೇಶಿ ಫಂಡ್ ಪಡೆಯದಂತೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಸೆಬಿ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಹಣ ಪಡೆಯಬಹುದು ಎಂದು ಅವಕಾಶ ಕೊಟ್ಟಿದ್ದಾರೆ. ಅದು ಅನುಕೂಲಕರ ಅಂಶ.
ಬ್ಯಾಂಕ್ ಸುಧಾರಣೆ:ಬ್ಯಾಂಕುಗಳಿಗೆ ನಿರೀಕ್ಷೆಗಿಂತ ಹೆಚ್ಚು ಅನುದಾನ ನೀಡಿದ್ದಾರೆ.ಸಾಲ ಕೊಟ್ಟವನೊಬ್ಬ. ತಿಂದು ಹೋಗುವವನೊಬ್ಬ, ಅದನ್ನು ವಸೂಲಿ ಮಾಡಲು ಇನ್ನೊಬ್ಬ ಎನ್ನುವಂತಾಗಿದೆ. ಈ ವ್ಯವಸ್ಥೆ ಸರಿಪಡಿಸಲು ನಿರ್ದಿಷ್ಟ, ದಿಟ್ಟ ಕ್ರಮಗಳನ್ನು ಘೋಷಿಸಬೇಕಿತ್ತು.
ಶಿಸ್ತುಬದ್ಧ ಬಜೆಟ್: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ಗೆ7 ಅಂಕ ಕೊಡುವೆ (ಮುರಳೀಧರ). ಇದು ಶಿಸ್ತುಬದ್ಧ ಬಜೆಟ್.ಎರಡನೇ ಬಾರಿಗೆ ಆಯ್ಕೆ ಮಾಡಿದ ಜನರ ವಿಶ್ವಾಸಕ್ಕೆಪೂರಕವಾಗಿ ತಾವು ಹಿಂದೆ ಹೊಂದಿದ್ದ ರಕ್ಷಣಾ ಇಲಾಖೆ ಅನುಭವವ ಮೇಲೆ ಆಧಾರದ ಮೇಲೆ ನಿರ್ಮಲಾ ಬಜೆಟ್ ಸಿದ್ಧಪಡಿಸಿದ್ದಾರೆ.
ಚಿನ್ನದ ಸುಂಕಹೆಚ್ಚಳ ಸರಿಯೇ?ಚಿನ್ನದ ಮೇಲಿನ ಸುಂಕಹೆಚ್ಚಿಸಿರುವುದು ಸ್ವಾಗತಾರ್ಹ. ಇನ್ನೂ ಹೆಚ್ಚು ಮಾಡಬಹುದಿತ್ತು.ಒಬ್ಬ ಸಾಮಾನ್ಯ ವ್ಯಕ್ತಿ ವರ್ಷಕ್ಕೆ ಕನಿಷ್ಠ 10 ಸಾವಿರ ಮೌಲ್ಯದ್ದನ್ನು ಖರೀದಿಸಬಹುದು. ಆದರೆ, ಅವರು ಮಾರಲು ಖರೀದಿಸುವುದಿಲ್ಲ. ಬಳಕೆಗೆ ಖರೀದಿಸುತ್ತಾರೆ. ಆದರೆ, ವ್ಯಾಪಾರಿಗಳು ಮಾರಲು ಖರೀದಿಸುತ್ತಾರೆ. ಇದರಿಂದ ಸರ್ಕಾರಕ್ಕೆ ವರಮಾನ ಬರುತ್ತದೆ. ಇದಿಲ್ಲದಿದ್ದರೆ ಚಿನ್ನ ವ್ಯಾಪಾರಿಗಳ ಮೇಲೆ ಲಂಗು ಲಗಾಮು ಇಲ್ಲದಂತಾಗುತ್ತದೆ.
ಪೆಟ್ರೋಲ್, ಆಟೊಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್:ಆಟೊಮೊಬೈಲ್ ಉದ್ಯಮಕ್ಕೆ ಕೆಲ ರಿಯಾಯ್ತಿ ನೀಡಲು ಜಿಎಸ್‌ಟಿ ಮಂಡಳಿಗೆ ಶಿಫಾರಸ್ಸು ಮಾಡುವುದಾಗಿ ಘೋಷಿಸಿ ನಿರ್ಮಲಾ ಚಪ್ಪಾಳೆ ಗಿಟ್ಟಿಸಿಕೊಂಡರು.ಆಟೊಮೊಬೈಲ್ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಮಾಲಿಕರಿಗೆ ಬಾಡಿಗೆ ಬರುತ್ತಿಲ್ಲ. ಬಾಡಿಗೆ ಪಡೆದವರಿಗೆ ಕೊಡಲು ಆಗುತ್ತಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬಹುದಾಗಿತ್ತು.
* ಇವನ್ನೂ ಓದಿ...
ಬಜೆಟ್ ಲೈವ್ ಅಪ್‌ಡೇಟ್ಸ್‌ಗಾಗಿhttp://bit.ly/2YB34Wyಲಿಂಕ್ ಕ್ಲಿಕ್ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.