ADVERTISEMENT

ಪ್ರಜಾವಾಣಿಯ ಡಿಜಿಟಲ್ ಲೋಕ: ಕಾಲದ ಜೊತೆಗೆ ನಡಿಗೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 2:04 IST
Last Updated 15 ಅಕ್ಟೋಬರ್ 2022, 2:04 IST
ಪ್ರಜಾವಾಣಿ ವೆಬ್‌
ಪ್ರಜಾವಾಣಿ ವೆಬ್‌   

1998ರ ಫೆಬ್ರವರಿ 27ರಂದು prajavani.net ಜಾಲತಾಣದ ಮೂಲಕ ಪ್ರಜಾವಾಣಿಯು ಡಿಜಿಟಲ್ ಜಗತ್ತಿಗೆ ಕಾಲಿರಿಸಿತು. ಸಮಕಾಲೀನತೆಗೆ ಸ್ಪಂದಿಸಿ ರೂಪಾಂತರಗೊಳ್ಳುತ್ತಾ, ಹೊಸ ವಿನ್ಯಾಸಗಳಿಗೆ ಬದಲಾಗುತ್ತಾ 2020ರಿಂದೀಚೆಗೆ ಆ್ಯಪ್ ಮೂಲಕವೂ ವಿಶ್ವಾಸಾರ್ಹ ಸುದ್ದಿ ಮಾಹಿತಿಯನ್ನು ಓದುಗರಿಗೆ ತಲುಪಿಸುತ್ತಿದೆ. ಡಿಜಿಟಲ್ ಲೋಕದಲ್ಲಿ ಪ್ರಜಾವಾಣಿಯ ಹೆಜ್ಜೆ ಗುರುತುಗಳು ಹೀಗಿವೆ:

l ಫೇಸ್‌ಬುಕ್ ಪುಟ (@Prajavani.net): 2011 ಮಾರ್ಚ್ 8ರಂದು ಆರಂಭ | ಪ್ರಸ್ತುತ 11 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳು

l ಟ್ವಿಟರ್ ಖಾತೆ (@Prajavani): 2010 ಅಕ್ಟೋಬರ್‌ ನಲ್ಲಿ ಆರಂಭ | 2.34 ಲಕ್ಷ ಫಾಲೋವರ್‌ಗಳು

ADVERTISEMENT

l ಯೂಟ್ಯೂಬ್ ಚಾನೆಲ್ (@Prajavani): 2011ರ ಮಾರ್ಚ್ 09ರಂದು ಆರಂಭ | 1.46 ಲಕ್ಷ ಚಂದಾದಾರರು

l ಇನ್‌ಸ್ಟಾಗ್ರಾಂ ಖಾತೆ (@Prajavani): 2016 ಫೆಬ್ರವರಿ ತಿಂಗಳಲ್ಲಿ ಆರಂಭ | 58 ಸಾವಿರ ಫಾಲೋವರ್‌ಗಳು

l ಕನ್ನಡ ಧ್ವನಿ ಹೆಸರಿನಲ್ಲಿ ಪಾಡ್‌ಕಾಸ್ಟ್ ಚಾನೆಲ್(@Prajavani) : 2020ರ ಮೇ 07ರಂದು ಆರಂಭ | ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಕೇಳುಗರು

l ಪತ್ರಿಕಾಲೋಕದ ಇತಿಹಾಸದಲ್ಲಿ ಫೇಸ್‌ಬುಕ್‌ನಲ್ಲಿ ಮೊದಲ ಬಾರಿಗೆ ರಾಜಕೀಯ ಚರ್ಚಾ ಸರಣಿ ಪ್ರಜಾಮತ, ಬರೆಯದ ಕಥೆಗಳು, ಮಿಸಳ್ ಹಾಪ್ಚಾ, ಕ್ಯಾಚ್ ಇಟ್ ಕ್ರೀಡಾ ಕಥೆಗಳು, ಸಿನಿ ಸಿಪ್, ರಾಜಕೀಯ ರಸಪ್ರಸಂಗ, ಕರುನಾಡ ಸವಿಯೂಟ, ಗ್ರಾಮಾರೋಗ್ಯ, ಜಸ್ಟ್ ಮ್ಯೂಸಿಕ್, ಗ್ರೀನ್ ಟಾಕ್, ಸೌಹಾರ್ದ ಕರ್ನಾಟಕ ಮುಂತಾದ ವಿಡಿಯೊ ಸರಣಿಗಳು ಜನಪ್ರಿಯ.

l ಪತ್ರಿಕೆಯಂತೆಯೇ ಆನ್‌ಲೈನ್‌ನಲ್ಲಿ ಓದಲು ಇ-ಪೇಪರ್

l ಕೊರೊನಾ ಕಾಲದಲ್ಲಿ ಲೈಫ್ ಡೌನ್ ಕಥೆಗಳು ಸರಣಿಯ ಮೂಲಕ ಜನರ ಸಂಕಷ್ಟವನ್ನು ಆಡಳಿತಾರೂಢರ ಮುಂದಿಡುವ ವಿನೂತನ ಪ್ರಯತ್ನ

l ಕೊರೊನಾ ಕಾಲದಲ್ಲಿ ಮನರಂಜನಾ ಕಾರ್ಯಕ್ರಮಗಳ ಆಯೋಜನೆ, ನೇರ ಪ್ರಸಾರ

l 2020ರಲ್ಲಿ ಪ್ರಜಾವಾಣಿ ಓದುಗರಿಗೆ ಸುದ್ದಿಯನ್ನು ವೇಗವಾಗಿ ತಲುಪಿಸಲು ಆಂಡ್ರಾಯ್ಡ್ ಮತ್ತು ಆ್ಯಪಲ್ ಫೋನ್‌ಗಳಿಗಾಗಿ ಆ್ಯಪ್

l 2021ರಲ್ಲಿ ಯುವ ಜನಾಂಗದ ಶೈಕ್ಷಣಿಕ ಮತ್ತು ಔದ್ಯೋಗಿಕ ಮಾಹಿತಿ ಉದ್ದೇಶದ ಮಾಸ್ಟರ್‌ಮೈಂಡ್ ಇ-ಪೇಪರ್ ಪ್ರಾರಂಭ.

ಕನ್ನಡ ಧ್ವನಿ ಪಾಡ್‌ಕಾಸ್ಟ್

ಕನ್ನಡ ಪತ್ರಿಕಾ ಲೋಕದಲ್ಲೇ ಮೊದಲ ಬಾರಿಗೆ ಪಾಡ್‌ಕಾಸ್ಟ್ ಮೂಲಕ ಜನರನ್ನು ತಲುಪಿದ ಮಾಧ್ಯಮ ಎಂಬ ಹೆಗ್ಗಳಿಕೆ ಪ್ರಜಾವಾಣಿಯದ್ದು. ಕೊರೊನಾ ಕಾಲದಲ್ಲಿಯೇ ಈ ಪ್ರಯೋಗಕ್ಕೆ ಚಾಲನೆ ದೊರೆತು 2020ರ ಮೇ ತಿಂಗಳಲ್ಲಿ ಕನ್ನಡ ಧ್ವನಿ ಹೆಸರಿನಲ್ಲಿ ಪ್ರಾರಂಭವಾದ ಪಾಡ್‌ಕಾಸ್ಟ್ ಚಾನೆಲ್‌ನಲ್ಲಿ ಸುದ್ದಿ ಬುಲೆಟಿನ್, ಆರೋಗ್ಯ, ಸಿನಿಮಾ, ಸಂವಾದ, ಪ್ರಚಲಿತ, ವಚನವಾಣಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿಬಂದಿವೆ. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಓದುಗರು ಆಲಿಸಿರುವುದು ಕನ್ನಡ ಪತ್ರಿಕಾ ಲೋಕದಲ್ಲಿ ಅನನ್ಯ ಸಾಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.