ಬಿ.ಆರ್. ಲಕ್ಷ್ಮಣರಾವ್, ಅವರು ಕನ್ನಡದ ಪ್ರೇಮಕವಿ, ತುಂಟ, ಲವಲವಿಕೆಯ ಕವಿ, ಅವರ ಬದುಕು– ಬರಹ ಎಲ್ಲವೂ ಹಾಗೆಯೇ. ಎಲ್ಲವನ್ನೂ ತಿಳಿದಿದ್ದರೂ ಯಾವ ಗುಂಪಿಗೂ ಸೇರದ, ಎಲ್ಲರಿಗೂ ಬೇಕಾದ ಕವಿ, ಭಾವಗೀತೆಗಳ ಕವಿ. ಅವರ ‘ಸುಬ್ಭಾಭಟ್ಟರ ಮಗಳೇ’, ‘ನಾನು ಚಿಕ್ಕವನಿದ್ದಾಗ ಅಪ್ಪಾ ಹೇಳುತ್ತಿದ್ದರು’, ‘ನೀ ನಿಂಬೆಯ ಗಿಡದಿಂದೊಳ್ಳೆಯ ಪಾಠವ ಕಲೀ ಮಗು’ ಅಂತಹ ಕವಿತೆಗಳು ಜನಪ್ರಿಯ.
ಆ ಕವಿತೆಗಳು ಹುಟ್ಟಿದ ಬಗೆ ಹೇಗೆ? ಕನ್ನಡಕ್ಕೆ ಪರಿಚಯಿಸಿದ ಹೊಸ ಮಾದರಿಯ ಕವಿತೆಗಳು ಹುಟ್ಟಿದ್ದು, ಕವಿತೆಯಲ್ಲಿ ಬಿಂಬಿಸಿದ ಸಂಘರ್ಷಗಳು ಏನೇನು ಇಂಥ ಹಲವು ಸಂಗತಿಗಳ ಲೋಕಾಭಿರಾಮದ ಮಾತು ಪ್ರಜಾವಾಣಿ ಸೆಲೆಬ್ರಿಟಿಯಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.