ADVERTISEMENT

ಸಂಗತ | ಜಗತ್ತು ಬೆಸೆಯುವ ಸಾಧನ

ದೊಡ್ಡರಂಗೇಗೌಡ
Published 15 ನವೆಂಬರ್ 2022, 20:15 IST
Last Updated 15 ನವೆಂಬರ್ 2022, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವು ವಾರ್ಷಿಕ ಆಚರಣೆಯಾಗಿದ್ದು, ಗ್ರಂಥಾಲಯಗಳ ಅಮೂಲ್ಯವಾದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಕಾಲ, ಭೌಗೋಳಿಕ ಅಂತರದಂತಹ ಎಲ್ಲಾ ಮಿತಿಗಳನ್ನು ಭೇದಿಸುವ ಇ- ಗ್ರಂಥಾಲಯಗಳು, ನಿಜವಾದ ಅರ್ಥದಲ್ಲಿ ಇಡೀ ಜಗತ್ತೇ ಒಂದು ಪುಟ್ಟ ಹಳ್ಳಿ ಎಂಬಂತೆ ನೇರ ಸಂಪರ್ಕಕ್ಕೆ ಅವಕಾಶ ಕಲ್ಪಿಸುತ್ತವೆ.

ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗ್ರಂಥಾಲಯದ ಜೊತೆಗೆ ಅಂತರ್ಜಾಲ ಸೌಲಭ್ಯವನ್ನು ಒದಗಿಸುವುದು ಅತ್ಯಂತ ಜರೂರಿನ ಕರ್ತವ್ಯವಾಗಿದೆ. ಜನರಿಗೆ ಬೇಕಾದ ಮಾಹಿತಿ ಅವರವರ ಭಾಷೆಯಲ್ಲಿ ಸಿಗುವಂತೆ ಆಗಬೇಕು.

ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಅವರು ಹಾಕಿಕೊಟ್ಟ ಪಂಚ ಸೂತ್ರಗಳು ಗ್ರಂಥಾಲಯ ಸೇವೆಗೆ ಆಧಾರಸ್ತಂಭಗಳಾಗಿವೆ. ಅವುಗಳೆಂದರೆ: 1. ಗ್ರಂಥಗಳು ಉಪಯೋಗಕ್ಕಾಗಿ ಇವೆ. 2. ಪ್ರತಿಯೊಬ್ಬ ಓದುಗನಿಗೊಂದು ಗ್ರಂಥ. 3. ಪ್ರತೀ ಗ್ರಂಥಕ್ಕೊಬ್ಬ ಓದುಗ. 4. ಓದುಗನ ಸಮಯ ಉಳಿಸಿ. 5. ಗ್ರಂಥಾಲಯ ಸದಾ ಬೆಳೆವ ಶಿಶು.

ADVERTISEMENT

ಇಂದಿನ ಗ್ರಂಥಪಾಲಕ ಬರೀ ಗ್ರಂಥರಕ್ಷಕನಾಗಿರದೆ ಉತ್ತಮ ಗ್ರಂಥಗಳ ಕ್ರೋಡೀಕರಣಕ್ಕಾಗಿ, ಅವುಗಳ ಉಪಯೋಗಕ್ಕಾಗಿ, ಓದುಗರ ಜ್ಞಾನದಾಹ ತಣಿಸುವುದಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ಒಳಗೊಂಡ ಮಾಹಿತಿ ವಿಜ್ಞಾನಿಯಾಗಿದ್ದಾನೆ.
–ಡಾ. ಎಂ.ಕೃಷ್ಣಮೂರ್ತಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.