ADVERTISEMENT

ಮಂಗಳವಾರ, 7–2–1967

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 19:30 IST
Last Updated 6 ಫೆಬ್ರುವರಿ 2017, 19:30 IST

ಕಾಳಿ ನದಿ ವಿದ್ಯುತ್ ಯೋಜನೆ ಕೆಲಸ ಮುಂದುವರಿಸಲು ಕೇಂದ್ರದ ಸೂಚನೆ
ನವದೆಹಲಿ, ಫೆ. 6–
ಕಾಳಿ ನದಿ ವಿದ್ಯುತ್ ಯೋಜನೆಯ ಕೆಲಸವನ್ನು ಮುಂದುವರಿಸುವಂತೆ ಯೋಜನಾ ಆಯೋಗವು ಮೈಸೂರು ಸರ್ಕಾರಕ್ಕೆ ತಿಳಿಸಿದೆಯಲ್ಲದೆ ಈ ಉದ್ದೇಶಕ್ಕೆ ಅಗತ್ಯವಾದ ಹಣವನ್ನು ನೀಡುವುದಾಗಿಯೂ ತಿಳಿಸಿದೆ.
ಯೋಜನೆ ಮೇಲಿನ ವರದಿಯನ್ನು ಸರಿಯಾಗಿ ಪರಿಶೀಲಿಸಿದ ಮೇಲೆ ಯೋಜನೆಯನ್ನು ಕಾರ್ಯಗತ ಗೊಳಿಸುವುದಕ್ಕೆ ಮಂಜೂರು ನೀಡಲಾಗುವುದು. ರಾಜ್ಯ ಸರ್ಕಾರವು ಈ ಕೆಲಸವನ್ನು ತ್ವರಿತವಾಗಿ ಕೈಗೊಂಡರೆ ಪ್ರಮುಖ ಅಣೆಕಟ್ಟಿನ ಕೆಲಸವನ್ನು ನಾಲ್ಕನೆ ಯೋಜನೆ ಮಧ್ಯದಲ್ಲಿ ಪ್ರಾರಂಭಿಸಬಹುದೆಂದು ನಂಬಲಾಗಿದೆ.

ರಾಜ್ಯಗಳ ನಾಲ್ಕನೆಯ ಯೋಜನೆಗಳ ಒಟ್ಟು ವೆಚ್ಚ 7071.7 ಕೋಟಿ ರೂ.
ನವದೆಹಲಿ, ಫೆ. 6–
ರಾಜ್ಯ ಸರ್ಕಾರಗಳ ನಾಲ್ಕನೆಯ ಯೋಜನೆಗಳ ಒಟ್ಟು ವೆಚ್ಚ 7071.7 ಕೋಟಿ ರೂ. ತೃತೀಯದಲ್ಲಿ ಒಟ್ಟು ವೆಚ್ಚ 4147.7 ಕೋಟಿ ರೂ. ಆಗಿತ್ತು ಎಂದು ಯೋಜನಾ ಆಯೋಗ ಪ್ರಕಟಿಸಿದೆ. ಪಶ್ಚಿಮ ಬಂಗಾಳವನ್ನು ಬಿಟ್ಟು ಇತರ ಎಲ್ಲ ರಾಜ್ಯಗಳು ಯೋಜನಾ ವೆಚ್ಚವನ್ನು  ಅಂತಿಮಗೊಳಿಸಿ
ಈಗಾಗಲೇ ಪ್ರಕಟಿಸಿವೆ.

ಮತದಾನಕ್ಕಾಗಿ 15ರಂದು ರಜಾ ದಿನ
ಬೆಂಗಳೂರು, ಫೆ. 6–
ನಾಲ್ಕನೆಯ ಸಾರ್ವತ್ರಿಕ ಚುನಾವಣೆಯ ಮತದಾನ ದಿನವಾದ 15ನೇ ತಾರೀಖು ಯಾವ ಯಾವ ಕ್ಷೇತ್ರಗಳಲ್ಲಿ ಮತದಾನ ನಡೆಯುವುದೋ ಆ ಕ್ಷೇತ್ರಗಳಲ್ಲಿ ಸಾರ್ವತ್ರಿಕ ರಜಾ ದಿನವೆಂದು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.