ADVERTISEMENT

25 ವರ್ಷಗಳ ಹಿಂದೆ | ಮೈಸೂರು ಅರಮನೆ ಸ್ವಾಧೀನ ಮಸೂದೆ; ಕೊನೆಗೂ ಕೇಂದ್ರದ ಒಪ್ಪಿಗೆ

ಪ್ರಜಾವಾಣಿ ವಿಶೇಷ
Published 27 ನವೆಂಬರ್ 2023, 19:30 IST
Last Updated 27 ನವೆಂಬರ್ 2023, 19:30 IST
   

ಮೈಸೂರು ಅರಮನೆ ಸ್ವಾಧೀನ ಮಸೂದೆ; ಕೊನೆಗೂ ಕೇಂದ್ರ ಸರ್ಕಾರದ ಒಪ್ಪಿಗೆ

ನವದೆಹಲಿ, ನ.27– ರಾಷ್ಟ್ರಪತಿ ಅವರ ಒಪ್ಪಿಗೆ ಸಿಕ್ಕಿದ ನಂತರವೂ ಕಳೆದ ಮೂರು ತಿಂಗಳಿಂದ ಕೇಂದ್ರ ಸರ್ಕಾರ ತಡೆಹಿಡಿದಿದ್ದ ಮೈಸೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಮಸೂದೆ-1998 ಅನ್ನು ಕೊನೆಗೂ ಒಪ್ಪಿ ರಾಜ್ಯ ಸರ್ಕಾರಕ್ಕೆ ಇಂದು ಕಳುಹಿಸಿತು.

ಇದರಿಂದಾಗಿ ಇದುವರೆಗೂ ಇದ್ದ ಈ ವಿವಾದಕ್ಕೆ ತೆರೆಬಿದ್ದು, ಕರ್ನಾಟಕ ಸರ್ಕಾರ ನಿಟ್ಟುಸಿರು ಬಿಡುವಂತಾಯಿತು. ಕರ್ನಾಟಕ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್ ಮತ್ತು ಕಾನೂನು ಸಚಿವ ಎಂ.ಸಿ.ನಾಣಯ್ಯ ಅವರು ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರನ್ನು ಇಂದು ಸಂಜೆ ಐದೂವರೆಗೆ ಭೇಟಿಯಾದ ಸ್ವಲ್ಪ ಸಮಯದಲ್ಲೇ ಕೇಂದ್ರ ಸರ್ಕಾರ ಈ ಮಸೂದೆಯನ್ನು ಯಥಾವತ್ತಾಗಿ ಒಪ್ಪಿ ಕರ್ನಾಟಕ ಸರ್ಕಾರಕ್ಕೆ ಅಧಿಕೃತವಾಗಿ ತಿಳಿಸಿತು.

ADVERTISEMENT

ಅಕ್ರಮ ದಾಸ್ತಾನುಗಾರರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ಎಚ್ಚರಿಕೆ

ನವದೆಹಲಿ, ನ.27– ‘ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವುದಕ್ಕೆ ಮಧ್ಯವರ್ತಿಗಳು ಕಾರಣ’ ಎಂದು ಹೇಳಿರುವ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅಕ್ರಮ ದಾಸ್ತಾನು ಮತ್ತು ಅವ್ಯವಹಾರಗಳಲ್ಲಿ ತೊಡಗಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.

ಬೆಲೆ ಏರಿಕೆ ಕುರಿತ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಒಂದು ದಿವಸದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಕ್ರಮ ದಾಸ್ತಾನುಗಾರರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವ ಸಲುವಾಗಿ ಅವಶ್ಯಕ ಸಾಮಗ್ರಿಗಳ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.