ADVERTISEMENT

25 ವರ್ಷಗಳ ಹಿಂದೆ | ಮಾತುಕತೆಗೆ ಕ್ಲಿಂಟನ್ ಆಹ್ವಾನ: ಪ್ರಧಾನಿ ವಾಜಪೇಯಿ ತಿರಸ್ಕಾರ

5 ಜುಲೈ 1979, ಸೋಮವಾರ

ಪ್ರಜಾವಾಣಿ ವಿಶೇಷ
Published 4 ಜುಲೈ 2024, 19:30 IST
Last Updated 4 ಜುಲೈ 2024, 19:30 IST
   

ಮಾತುಕತೆಗೆ ಕ್ಲಿಂಟನ್ ಆಹ್ವಾನ: ಪ್ರಧಾನಿ ವಾಜಪೇಯಿ ತಿರಸ್ಕಾರ

ನವದೆಹಲಿ, ಜುಲೈ 4 (ಪಿಟಿಐ): ಮಾತುಕತೆಗೆ ಬರುವಂತೆ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ನೀಡಿರುವ ಆಹ್ವಾನವನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.

ಕಾರ್ಗಿಲ್ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಆಹ್ವಾನದಂತೆ ಸದ್ಯ ತಮಗೆ ಅಮೆರಿಕಕ್ಕೆ ಬರಲು ಸಾಧ್ಯವಿಲ್ಲ ಎಂದು ಪ್ರಧಾನಿ ವಾಜಪೇಯಿ ಅವರು ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ತಿಳಿಸಿದ್ದಾರೆ. ಕ್ಲಿಂಟನ್ ಅವರು ನಿನ್ನೆ ಸಂಜೆ ವಾಜಪೇಯಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು.

ADVERTISEMENT

****

ಪಯಸ್–ಭೂಪತಿಗೆ ವಿಂಬಲ್ಡನ್ ಟ್ರೋಫಿ

ಲಂಡನ್, ಜುಲೈ 4– ಫ್ರೆಂಚ್ ಓಪನ್ ಗೆಲುವಿನ ಸಂಭ್ರಮ ಇನ್ನೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವಂತೆಯೇ ಭಾರತದ ಅಗ್ರ ಶ್ರೇಯಾಂಕದ ಲಿಯಾಂಡರ್ ಪಯಸ್ ಮತ್ತು ಮಹೇಶ್ ಭೂಪತಿ ಇಂದು ವಿಂಬಲ್ಡನ್‌ನಲ್ಲಿ ಇನ್ನೊಂದು ಸಾಧನೆಯ ಚರಿತ್ರೆ ಬರೆದರು.

ಎಂಟನೇ ಶ್ರೇಯಾಂಕದ ಪಾಲ್ ಹಾರಿಯಸ್ ಮತ್ತು ಚೇರಡ್ ಪಾಲ್ಮರ್ ಅವರನ್ನು ನಾಲ್ಕು ಸೆಟ್‌ಗಳ ಹೋರಾಟದಲ್ಲಿ 6–7, 6–3, 6–4, 7–6ರಿಂದ ಮಣಿಸಿದ ಭಾರತದ ಜೋಡಿ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.