ADVERTISEMENT

25 ವರ್ಷಗಳ ಹಿಂದೆ: ವಿಕೇಂದ್ರೀಕರಣ, ರಸ್ತೆ, ಕುಡಿಯುವ ನೀರಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 20:57 IST
Last Updated 27 ಅಕ್ಟೋಬರ್ 2024, 20:57 IST
<div class="paragraphs"><p>25 ವರ್ಷಗಳ ಹಿಂದೆ..</p></div>

25 ವರ್ಷಗಳ ಹಿಂದೆ..

   

ವಿಕೇಂದ್ರೀಕರಣ, ರಸ್ತೆ, ಕುಡಿಯುವ ನೀರಿಗೆ ಆದ್ಯತೆ

ಬೆಂಗಳೂರು, ಅ. 27– ಅಧಿಕಾರ ವಿಕೇಂದ್ರೀಕರಣದ ಜಾರಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ, ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಕ್ರಮ, ರಸ್ತೆಗಳ ಅಭಿವೃದ್ಧಿಗೆ ತ್ವರಿತ ಕ್ರಿಯಾಯೋಜನೆ, ಮುಂದಿನ 5 ವರ್ಷಗಳಲ್ಲಿ ಎಲ್ಲ ಗ್ರಾಮಗಳಲ್ಲಿ ದಿನಕ್ಕೆ ಕನಿಷ್ಠ ತಲಾ 55 ಲೀಟರ್ ಶುದ್ಧ ಕುಡಿಯುವ ನೀರು, ನಿವೇಶನ ರಹಿತರಿಗೆ ನಿವೇಶನ, ಮನೆ ಇಲ್ಲದ ಬಡವರಿಗೆ ಮನೆ, ಸಾಕ್ಷರತೆ ಪ್ರಮಾಣವನ್ನು ಶೇಕಡ 80ಕ್ಕೆ ಏರಿಸುವ ಭರವಸೆಯನ್ನು ಎಸ್.ಎಂ. ಕೃಷ್ಣ ಅವರ ನಾಯಕತ್ವದ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಮೂಲಕ ರಾಜ್ಯದ ಜನತೆಗೆ ನೀಡಿದೆ.

ADVERTISEMENT

ಪೋಪ್ ಭೇಟಿ: ಸಂಘ ಪರಿವಾರ ವಿರೋಧಕ್ಕೆ ಕೇಂದ್ರ ಸರ್ಕಾರ ಖಂಡನೆ

ನವದೆಹಲಿ, ಅ. 27– ವಿಶ್ವದ ಕ್ರೈಸ್ತರ ಧರ್ಮಗುರು ಎರಡನೇ ಪೋಪ್ ಜಾನ್‌ಪಾಲ್ ಅವರ ಉದ್ದೇಶಿತ ಭಾರತ ಭೇಟಿಯನ್ನು ವಿರೋಧಿಸುತ್ತಿರುವ ಪ್ರಯತ್ನವನ್ನು ಸರ್ಕಾರ ಇಂದು ಖಂಡಿಸಿತಲ್ಲದೆ ಅವರ ಭೇಟಿಯು ಯಶಸ್ವಿಯಾಗುವಂತೆ ನೋಡಿಕೊಳ್ಳುವ ಭರವಸೆ ನೀಡಿತು.

ಕಾಂಗ್ರೆಸ್‌ನ ಮಣಿಶಂಕರ್ ಅಯ್ಯರ್ ಮತ್ತು ಪ್ರಿಯರಂಜನ್ ದಾಸ್‌ ಮುನ್ಷಿ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಗೃಹ ಸಚಿವ ಲಾಲ್‌ ಕೃಷ್ಣ ಅಡ್ವಾಣಿ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.