ಚೆನ್ನೈ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ದಾಂದಲೆ: 11 ಸಾವು
ಚೆನ್ನೈ, ನ. 17– ಚೆನ್ನೈ ನಗರದ ಕೇಂದ್ರ ಕಾರಾಗೃಹದಲ್ಲಿ ಇಂದು ನಡೆದ
ಭೀಕರ ಹಿಂಸಾಕೃತ್ಯ ಹಾಗೂ ಅದನ್ನು
ಹತ್ತಿಕ್ಕಲು ಪೊಲೀಸರು ನಡೆಸಿದ ಗೋಲಿಬಾರ್‌ಗೆ 10 ಮಂದಿ ಕೈದಿಗಳು
ಹಾಗೂ ಒಬ್ಬ ಜೈಲು ಅಧಿಕಾರಿ ಬಲಿಯಾಗಿದ್ದಾರೆ. ಉದ್ರಿಕ್ತ ಕೈದಿಗಳು ಆ ಅಧಿಕಾರಿಯನ್ನು ಜೀವಂತವಾಗಿ ಸುಟ್ಟಿದ್ದಾರೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೊಲೀಸರ ವಶದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಹಿಂಸೆ ಭುಗಿಲೆದ್ದಿತು. ಜೈಲಿನಲ್ಲಿ ಕೈದಿಗಳು ನಡೆಸಿದ ದಾಂದಲೆಯನ್ನು ಸುಮಾರು ಮೂರೂವರೆ ಗಂಟೆಗಳವರೆಗೆ ರಹಸ್ಯವಾಗಿಡಲು ಸರ್ಕಾರ ಪ್ರಯತ್ನಿಸಿತು.
ಬಸ್ ಪ್ರಯಾಣ ದರ ಇಳಿಕೆ ಇಲ್ಲ: ಸ್ಪಷ್ಟನೆ
ಬೆಂಗಳೂರು, ನ. 17– ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಏರಿಸಿರುವ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ಸಗೀರ್ ಅಹಮದ್ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಪ್ರತಿ ಕಿ.ಮೀ.ಗೆ ಒಂದು ಪೈಸೆಯಷ್ಟು ದರ ಕಡಿಮೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ತಾವು ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದರೂ ದರ ಇಳಿಸುವ ಆಲೋಚನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಅವರು ಇಂದು ವರದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.