ADVERTISEMENT

25 ವರ್ಷದ ಹಿಂದೆ: ರಾಜ್ಯದ ಯೋಜನಾ ಗಾತ್ರ ₹5800 ಕೋಟಿಗೆ ಹೆಚ್ಚಿಸಲು ಆಯೋಗ ಒಪ್ಪಿಗೆ

ಪ್ರಜಾವಾಣಿ ವಿಶೇಷ
Published 4 ಮಾರ್ಚ್ 2024, 23:50 IST
Last Updated 4 ಮಾರ್ಚ್ 2024, 23:50 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ಮಾರ್ಚ್ 4– ಕರ್ನಾಟಕದ ವಾರ್ಷಿಕ ಯೋಜನಾ ಗಾತ್ರವನ್ನು
ರೂ. 5,800 ಕೋಟಿಗೆ ಹೆಚ್ಚಿಸಲು ಯೋಜನಾ ಆಯೋಗ ಇಂದು ಒಪ್ಪಿಗೆ ನೀಡಿದೆ.

ಪಂಚಾಯಿತಿಗಳಿಗೆ ಕೂಡಲೇ ಚುನಾವಣೆ ನಡೆಸಲು ಸಲಹೆ ಮಾಡುವುದರ ಜತೆಗೆ ಆಯೋಗವು ಮಾರುಕಟ್ಟೆ ಸಾಲ ಎತ್ತುವಳಿಗೆ ಕಡಿವಾಣ ಹಾಕಿದೆ. ಕೃಷಿ ವಲಯಕ್ಕೆ ಪೂರೈಸು ತ್ತಿರುವ ವಿದ್ಯುತ್ ಮತ್ತು ಬಸ್ ಪ್ರಯಾಣ ದರವು ಕರ್ನಾಟಕದಲ್ಲಿ ತೀರಾ ಕಡಿಮೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಸ್ತುತ ಯೋಜನಾ ಗಾತ್ರದಿಂದಾಗಿ 1998–99ರ ಸಾಲಿನ ಯೋಜನಾ ಗಾತ್ರಕ್ಕಿಂತ 1999–2000 ಸಾಲಿನಲ್ಲಿ ಶೇ 8.3 ಏರಿಕೆ ಆಗಿದೆ. ಕಳೆದ ಸಾಲಿನ ಯೋಜನಾ ಗಾತ್ರ
ರೂ. 5,353 ಕೋಟಿ ಇದ್ದಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.