ನವದೆಹಲಿ, ಜ.30: ಹವಾಲಾ ಹಗರಣದ ತನಿಖೆಯ ವ್ಯಾಪ್ತಿಯನ್ನು ಇಂದು ವಿಸ್ತೃತಗೊಳಿಸಿರುವ ಸುಪ್ರೀಂ ಕೋರ್ಟ್, ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ಹುದ್ದೆ, ಸ್ಥಾನಮಾನಗಳನ್ನು ಲೆಕ್ಕಿಸದೆ ಪ್ರತಿಯೊಬ್ಬರ ವಿರುದ್ಧವೂ ತ್ವರಿತ ತನಿಖೆ ನಡೆಸಬೇಕು. ಕೋರ್ಟಿನ ಸೂಚನೆ ಇಲ್ಲದೇ ಕಡತಗಳನ್ನು ಇತ್ಯರ್ಥಗೊಳಿಸಬಾರದು ಎಂದು ಆದೇಶಿಸಿದೆ. ಉನ್ನತ ಸ್ಥಾನದಲ್ಲಿರುವವರ ವಿರುದ್ಧವೂ ಹವಾಲಾ ಹಗರಣದ ಆರೋಪ ಇರುವುದರಿಂದ ಅಂಥ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಸಿಬಿಐ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.