ADVERTISEMENT

25 ವರ್ಷಗಳ ಹಿಂದೆ: ಬಿಸಿ ಗಾಳಿಯಿಂದ ಒಣ ಹವೆ, ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 20:07 IST
Last Updated 23 ಸೆಪ್ಟೆಂಬರ್ 2024, 20:07 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ಬಿಸಿ ಗಾಳಿಯಿಂದ ಒಣ ಹವೆ, ಬೆಳೆ ನಾಶ

ಬೆಂಗಳೂರು, ಸೆ. 23– ರಾಜ್ಯದಾದ್ಯಂತ ಕಳೆದ 15–20 ದಿನಗಳಿಂದ ಹೆಚ್ಚಿರುವ ಬಿಸಿಲಿನ ತಾಪಕ್ಕೆ ವಾಯವ್ಯ ದಿಕ್ಕಿನಿಂದ ಬೀಸುತ್ತಿರುವ ‘ಒಣ ಗಾಳಿ’ಯೇ ಕಾರಣ ಎಂಬ ಅಂಶ ಹವಾಮಾನ ತಜ್ಞರಿಂದ ತಿಳಿದುಬಂದಿದೆ.

ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ತೇವಾಂಶದ ಗಾಳಿ ಅರಬ್ಬಿ ಸಮುದ್ರದ ಕಡೆಯಿಂದ ರಾಜ್ಯದ ಕಡೆಗೆ ಬೀಸುತ್ತಿತ್ತು. ಇದರಿಂದ ಮಳೆ ಕೂಡ ಬರುತ್ತಿತ್ತು. ಆದರೆ, ಅಕ್ಟೋಬರ್ ಎರಡು ಅಥವಾ ಮೂರನೇ ವಾರದಿಂದ ಆರಂಭವಾಗಬೇಕಿದ್ದ ಈ ವಾಯವ್ಯ ಬಿಸಿ ಹವೆ ಸೆಪ್ಟೆಂಬರ್ ತಿಂಗಳಿಂದಲೇ ಆರಂಭವಾಗಿದೆ. ಹೀಗಾಗಿ ಕಳೆದ ಒಂದು ತಿಂಗಳಿಂದ ಸರಿಯಾಗಿ ಮಳೆಯಾಗಿಲ್ಲ. ಇದು ಆತಂಕಕ್ಕೆ ಎಡೆಮಾಡಿದೆ.

ADVERTISEMENT

ಮತಪೆಟ್ಟಿಗೆಗಳಿಗೆ ಭದ್ರತೆ

ಬೆಂಗಳೂರು, ಸೆ. 23– ರಾಜ್ಯದ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಎರಡು ಹಂತಗಳಲ್ಲಿ ನಡೆದ ಮತದಾನದ ನಂತರ ವಿವಿಧ ಪಕ್ಷಗಳ ಉಮೇದುವಾರರ ‘ರಾಜಕೀಯ ಭವಿಷ್ಯ’ ನಿರ್ಧರಿಸುವ ಮತಪೆಟ್ಟಿಗೆಗಳನ್ನು ಈಗ ಪೊಲೀಸ್ ಸರ್ಪಗಾವಲಿನಲ್ಲಿ ‘ಸುಭದ್ರ’ವಾಗಿ ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.