ADVERTISEMENT

25 ವರ್ಷಗಳ ಹಿಂದೆ: ಪರಾರಿಯಾದ ಒಬ್ಬ ಡಕಾಯಿತನ ಆತ್ಮಹತ್ಯೆ– ಇನ್ನೊಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 20:28 IST
Last Updated 26 ಸೆಪ್ಟೆಂಬರ್ 2024, 20:28 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ಸೋಮವಾರ 27–9–1999

ಪರಾರಿಯಾದ ಒಬ್ಬ ಡಕಾಯಿತನ ಆತ್ಮಹತ್ಯೆ– ಇನ್ನೊಬ್ಬನ ಬಂಧನ

ಲಿಂಗಸಗೂರು, ಸೆ. 26– ಇಲ್ಲಿನ ಉಪ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರು ಜನ ಡಕಾಯಿತರ ಪೈಕಿ ಬಲಭೀಮ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು ನಯಿಂ ಪಾಶಾ ಎಂಬಾತನನ್ನು ಬಂಧಿಸಲಾಗಿದೆ.

ADVERTISEMENT

ನಿನ್ನೆ ಬೆಳಿಗ್ಗೆ ಜೈಲಿನಿಂದ ತಪ್ಪಿಸಿಕೊಂಡು ಗುಡ್ಡಬೆಟ್ಟ ಅಲೆದ ಬಲಭೀಮ ಸಂಜೆ ಗುಂಡಸಾಗರ ಗ್ರಾಮ ತಲುಪಿ ಅಲ್ಲಿ ಹೊಲದ ಕೆಲಸ ಮಾಡುತ್ತಿದ್ದವರೊಬ್ಬರಿಂದ ರೊಟ್ಟಿ ಬೇಡಿಕೊಂಡು ತಿಂದ. ಅವರು ಕೆಲಸಕ್ಕೆ ತೆರಳಿದಾಗ ಅವರ ಬಟ್ಟೆ ಕದ್ದು ಅಲ್ಲಿಂದ ಕಾಲು ಕಿತ್ತ. ಪೊಲೀಸರಿಗೆ ಗುರುತು ತಿಳಿಯದಂತೆ ಬಟ್ಟೆ ಬದಲಾಯಿಸಿಕೊಳ್ಳುವುದು ಆತನ ಉದ್ದಶ ಎನ್ನಲಾಗಿದೆ. ಆದರೆ, ರಾತ್ರಿ ಗುಂಡಸಾಗರ ಹಾಗೂ ಕೈರವಾಡಗಿ ಸೀಮೆ ನಡುವಿನ ರಸ್ತೆ ಪಕ್ಕದ ಮರವೊಂದಕ್ಕೆ ತಾನುಟ್ಟಿದ್ದ ಲುಂಗಿಯನ್ನೇ ನೇಣಾಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ.

ಚೆನ್ನೈ: ಲಾರಿ ಹರಿದು ಒಂಬತ್ತು ಸಾವು

ಚೆನ್ನೈ, ಸೆ. 26 (ಪಿಟಿಐ)– ರಸ್ತೆ ಬದಿಯಲ್ಲಿ ಮಲಗಿದ್ದವರ ಮೇಲೆ ಲಾರಿ ಹರಿದು ಹದಿನೆಂಟು ತಿಂಗಳ ಮಗು ಮತ್ತು ಮಹಿಳೆಯರಿಬ್ಬರು ಸೇರಿ ಒಂಬತ್ತು ಮಂದಿ ಮೃತಪಟ್ಟ ದುರ್ಘಟನೆ ಇಲ್ಲಿನ ಅಶೋಕನಗರದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಸತ್ತವರೆಲ್ಲರೂ ಕಟ್ಟಡ ಹಾಗೂ ರಸ್ತೆ ನಿರ್ಮಾಣ ಕೆಲಸದ ಕಾರ್ಮಿಕರಾಗಿದ್ದು ಸೇಲಂ ಹಾಗೂ ತಿಂಡಿವನಂಗೆ ಸೇರಿದವರು. ಏಳು ಮಂದಿ ಸ್ಥಳದಲ್ಲೇ ಮೃತಪಟ್ಟರು. ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.