ಶುಕ್ರವಾರ 19, 11, 1999
ಆಶ್ರಯ ಯೋಜನೆ ರದ್ದು ಹೈಕೋರ್ಟ್ ತೀರ್ಪು
ಬೆಂಗಳೂರು, ನ. 18– ಮನೆ ಇಲ್ಲದವರಿಗೆ ನಿವೇಶನ, ಮನೆ ನೀಡುವ ರಾಜ್ಯದ ಆಶ್ರಯ ಯೋಜನೆಯನ್ನು ಹೈಕೋರ್ಟ್ ಇಂದು ರದ್ದುಗೊಳಿಸಿತು. ರಾಜ್ಯ ಸರ್ಕಾರ ರೂಪಿಸಿರುವ ಆಶ್ರಯ ಯೋಜನೆಯು ಸಂವಿಧಾನದ ಅನ್ವಯ ಕಾರ್ಯಾಂಗಕ್ಕೆ ದತ್ತವಾಗಿರುವ ಅಧಿಕಾರದ ವ್ಯಾಪ್ತಿಯನ್ನು ಮೀರಿದುದಾಗಿದೆ. ಅಲ್ಲದೆ ಈ ಬಗ್ಗೆ
ಸುಪ್ರೀಂ ಕೋರ್ಟಿನ ಸ್ಪಷ್ಟ ಆಜ್ಞೆ ಇರುವುದನ್ನೂ ಉಲ್ಲಂಘಿಸಲಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಆಸ್ತಿಯನ್ನು ಆಶ್ರಯ ಯೋಜನೆ ಎಂದು ಮನಸ್ಸಿಗೆ ಬಂದಂತೆ
ವಿತರಿಸುವುದಲ್ಲ. ಭೂಮಿಯನ್ನು ವಿತರಿಸುವಾಗ ಭೂ ಮಂಜೂರಾತಿ ನಿಯಮದ ಪ್ರಕಾರವೇ ಮಾಡಬೇಕು. ಹಂಚಿಕೆಗೆ ನಿರ್ದಿಷ್ಟ ನಿಯಮಾವಳಿ ಪಾಲಿಸದೇ ಹಂಚುವುದು ನಿಯಮಬಾಹಿರ ಎಂದು ಹೇಳಿದೆ.
ನಳಿನಿಗೆ ಕ್ಷಮಾದಾನ; ಸೋನಿಯಾ ಮನವಿ
ನವದೆಹಲಿ, ನ. 18 (ಯುಎನ್‌ಐ)– ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ಅಪರಾಧಿಯಾದ ನಳಿನಿಗೆ ನೀಡಲಾಗಿರುವ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿ, ಆಜೀವ ಕಾರಾಗೃಹ ಶಿಕ್ಷೆಗೆ ಬದಲಾಯಿಸುವಂತೆ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ
ಕೆ.ಆರ್.ನಾರಾಯಣನ್ ಅವರನ್ನು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.