ಆಸ್ತಿ ವಿವರ ನೀಡಲು ಸಂಪುಟ; ಸಚಿವರಿಗೆ ಕೃಷ್ಣ ಸೂಚನೆ
ಬೆಂಗಳೂರು, ನ. 22– ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರೂ ತಮ್ಮ
ಆಸ್ತಿಪಾಸ್ತಿ ವಿವರಗಳನ್ನು ಕೂಡಲೇ ತಮಗೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ
ಎಸ್.ಎಂ.ಕೃಷ್ಣ ಅವರು ಇಂದು ಆದೇಶಿಸಿದ್ದಾರೆ.
ಸ್ವಚ್ಛ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ನೀಡುವ ಸಲುವಾಗಿ ಮಂತ್ರಿಮಂಡಲದ ಸದಸ್ಯರೆಲ್ಲರೂ ವಾಡಿಕೆಯಂತೆ ತಮ್ಮ ಆಸ್ತಿಗಳ ವಿವರಗಳನ್ನು ಘೋಷಿಸಿ ಮೇಲ್ಪಂಕ್ತಿ ಹಾಕಬೇಕೆಂದು ಅವರು ಸಚಿವರುಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ನಂಬಲರ್ಹ ಮೂಲದಿಂದ ತಿಳಿದುಬಂದಿದೆ.
ಸಂಪುಟಕ್ಕೆ ಶೌರಿ ಸಹಿತ ನಾಲ್ವರು,
ಹೆಗಡೆಗೆ ತಪ್ಪಿದ ಸ್ಥಾನ
ನವದೆಹಲಿ, ನ. 22– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಮಂತ್ರಿ ಮಂಡಲಕ್ಕೆ ಈ ಬಾರಿಯೂ ರಾಮಕೃಷ್ಣ ಹೆಗಡೆ ಅವರನ್ನು ಕಡೆಗಣಿಸಿ ರಾಜನಾಥ್ ಸಿಂಗ್, ಸಿ.ಪಿ.ಠಾಕೂರ್, ಸುಖ್ ದೇವ್ ಸಿಂಗ್ ದಿಂಡ್ಸಾ ಮತ್ತು ಅರುಣ್ ಶೌರಿ ಅವರನ್ನು ಸೇರಿಸಿಕೊಳ್ಳುವ ಮೂಲಕ ಮಂತ್ರಿಮಂಡಲದ ಗಾತ್ರವನ್ನು 74ಕ್ಕೆ ವಿಸ್ತರಿಸಿದರು.
ಪ್ರಧಾನಿ ವಾಜಪೇಯಿ ಅವರು ಈ ನಾಲ್ವರಿಗೂ ಸಚಿವ ಖಾತೆಗಳನ್ನು ಇಂದೇ ಪ್ರಕಟಿಸುವ ಮೂಲಕ ಕೆಲವು ಹಿರಿಯ ಸಚಿವರ ಖಾತೆಗಳಲ್ಲಿಯೂ ಮಾರ್ಪಾಡು
ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.