ADVERTISEMENT

25 ವರ್ಷಗಳ ಹಿಂದೆ | ಕಾರ್ಗಿಲ್‌: ಆಕ್ರಮಣಕಾರರಿಂದ ಮುಕ್ತ

ಮಂಗಳವಾರ ಜುಲೈ 27, 1999

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 0:01 IST
Last Updated 27 ಜುಲೈ 2024, 0:01 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಪಟೇಲ್‌ ಬಣದ ದಳ ಜತೆ ಮೈತ್ರಿಗೆ ಬಿಜೆಪಿ ಒಲವು

ನವದೆಹಲಿ, ಜುಲೈ 26– ಕರ್ನಾಟಕದಲ್ಲಿ ಬಿಜೆಪಿ, ಲೋಕಶಕ್ತಿ ಹಾಗೂ ಜನತಾದಳದ ಜೆ.ಎಚ್‌. ಪಟೇಲ್‌ ಬಣದ ಜತೆಗೆ ಮುಂಬರುವ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಅವರು ಅನುಕೂಲ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. 

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಸೋಲಿಸುವುದೇ ಮುಖ್ಯವಾಗಿರುವ ಬಗ್ಗೆ ಇಂದು ಕುಶಭಾವು ಜತೆ ಸಮತಾ ಪಕ್ಷದ ಜಾರ್ಜ್‌ ಫರ್ನಾಂಡಿಸ್‌, ಲೋಕಶಕ್ತಿಯ ರಾಮಕೃಷ್ಣ ಹೆಗಡೆ ಹಾಗೂ ಲೋಕಶಕ್ತಿಯ ಕಾರ್ಯಾಧ್ಯಕ್ಷ ಡಾ. ಜೀವರಾಜ ಆಳ್ವ ಅವರು ಮಾತುಕತೆ ನಡೆಸಿದರು.

ADVERTISEMENT

ಕಾರ್ಗಿಲ್‌: ಆಕ್ರಮಣಕಾರರಿಂದ ಮುಕ್ತ

ನವದೆಹಲಿ, ಜುಲೈ 26 (ಪಿಟಿಐ)– ಎರಡೂವರೆ ತಿಂಗಳ ಕಾರ್ಯಾಚರಣೆ ನಂತರ ಕಾರ್ಗಿಲ್‌ ವಲಯದೊಳಕ್ಕೆ ನುಸುಳಿದ್ದ ಪಾಕಿಸ್ತಾನದ ಕಟ್ಟ ಕಡೆಯ ಅತಿಕ್ರಮಣದಾಕಾರರನ್ನು ಭಾರತೀಯ ಪಡೆಗಳು ಇಂದು ಹೊರದಬ್ಬಿದವಾದರೂ, ವಾಸ್ತವ ಹತೋಟಿ ರೇಖೆಯುದ್ದಕ್ಕೂ ಜಮಾಯಿಸಿರುವ ಎರಡೂ ರಾಷ್ಟ್ರಗಳ ಪಡೆಗಳ ನಡುವೆ ಭಾರಿ ಷೆಲ್‌ ದಾಳಿ ನಡೆಯಿತು.

ಇದರೊಂದಿಗೆ ಭಾರತೀಯ ಪಡೆಗಳು ಅಂತಿಮವಾಗಿ ವಾಸ್ತವ ಹತೋಟಿ ರಾಖೆಯಲ್ಲಿ ಯಥಾಸ್ಥಿತಿ ಕಾಪಾಡುವಲ್ಲಿ ಯಶಸ್ವಿಯಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.