ಬೊಫೋರ್ಸ್ ಆರೋಪಪಟ್ಟಿಗೆ ಒಪ್ಪಿಗೆ ಕ್ವಟ್ರೋಚಿ ಬಂಧನಕ್ಕೆ ವಾರಂಟ್
ನವದೆಹಲಿ, ನ. 4 (ಪಿಟಿಐ, ಯುಎನ್‌ಐ)– ಬೊಫೋರ್ಸ್ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯನ್ನು ನಗರದ ಸಿಬಿಐ ನ್ಯಾಯಾಲಯವು ಇಂದು ಅವಗಾಹನೆಗೆ ತೆಗೆದುಕೊಂಡು, ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಒಟ್ಟಾವಿಯೊ ಕ್ವಟ್ರೋಚಿಯ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಇನ್ನಿತರ ಆರೋಪಿಗಳಾದ ಬೊಫೋರ್ಸ್‌ನ ಮಾಜಿ ಏಜೆಂಟ್ ವಿನ್ ಛಡ್ಡಾ, ಮಾಜಿ ರಕ್ಷಣಾ ಕಾರ್ಯದರ್ಶಿ
ಎಸ್.ಕೆ. ಭಟ್ನಾಗರ್, ಬೊಫೋರ್ಸ್ ಕಂಪನಿಯ ಮಾಜಿ ಮುಖ್ಯಸ್ಥ ಮಾರ್ಟಿನ್ ಆರ್ಡ್‌ಬೊ ಹಾಗೂ ಬೊಫೋರ್ಸ್ ಕಂಪನಿಗೂ ಹಾಜರಾಗುವಂತೆ ಸಮನ್ಸ್ ಹೊರಡಿಸಲಾಗಿದೆ. ಇವರೆಲ್ಲ ಮುಂದಿನ ವಿಚಾರಣೆ ನಡೆಯುವ ಡಿ. 13ರಂದು ಹಾಜರಾಗಬೇಕಿದೆ.
ಸಮಗ್ರ ಕಾರಂತ ಸಾಹಿತ್ಯ ಇನ್ನೂ ಕನಸು
ಬೆಂಗಳೂರು, ನ. 4– ಕಡಲತೀರದ ಭಾರ್ಗವ ಕೋಟ ಶಿವರಾಮ ಕಾರಂತರು ಇನ್ನಿಲ್ಲವಾಗಿ ಎರಡು ವರ್ಷಗಳು ಸಮೀಪಿಸುತ್ತಿದ್ದು, ಅವರು ತೀರಿಕೊಂಡಾಗ ರಾಜ್ಯ ಸರ್ಕಾರ ನೀಡಿದ್ದ ಭಾರಿ ಭರವಸೆ, ‘ಕಾರಂತರ ಸಮಗ್ರ ಸಾಹಿತ್ಯ’ ಇನ್ನೂ ಕನ್ನಡಿಯೊಳಗಿನ ಗಂಟಾಗಿ ಕುಳಿತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.