ADVERTISEMENT

25 ವರ್ಷಗಳ ಹಿಂದೆ | ನೂರಾರು ಶವಗಳ ಪತ್ತೆ: ಅನ್ನ– ನೀರಿಗಾಗಿ ಸಂತ್ರಸ್ತರ ವಲಸೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 23:40 IST
Last Updated 8 ನವೆಂಬರ್ 2024, 23:40 IST
<div class="paragraphs"><p>25 ವರ್ಷಗಳ ಹಿಂದೆ..</p></div>

25 ವರ್ಷಗಳ ಹಿಂದೆ..

   

ಭುವನೇಶ್ವರ, ನ. 8 (ಯುಎನ್‌ಐ, ಪಿಟಿಐ)– ಸಂಪರ್ಕ ಕಡಿದುಕೊಂಡಿರುವ ಒರಿಸ್ಸಾ ತೀರದ ಜಗತ್‌ಸಿಂಗ್‌ಪುರ ಜಿಲ್ಲೆಯ ದೂರದ ಗ್ರಾಮಗಳ ರಸ್ತೆಗಳನ್ನು ಸೇನೆ ಸುಗಮಗೊಳಿಸು
ತ್ತಿರುವಂತೆ, ಸಾವಿನ ಸರಮಾಲೆಗೆ ಮತ್ತೆ ನೂರಾರು ಸಂಖ್ಯೆಗಳ ಸೇರ್ಪಡೆಯಾಗುತ್ತಿದೆ.

ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿರುವ ವರದಿಗಳ ಪ್ರಕಾರ, 480 ಕಿ.ಮೀ. ಉದ್ದದ ಒರಿಸ್ಸಾ ತೀರ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಿದಾಗಿನಿಂದ ಇದುವರೆಗೆ 3,460 ದೇಹಗಳು ಪತ್ತೆಯಾಗಿವೆ.

ADVERTISEMENT

ಸಾರ್ವಜನಿಕರ ಹಲ್ಲೆ: ಡಕಾಯಿತ ಸಾವು

ಬೆಂಗಳೂರು, ನ. 8– ಡಕಾಯಿತಿ ನಡೆಸಿ ಪರಾರಿಯಾಗುತ್ತಿದ್ದ ತಂಡವನ್ನು ಬೆನ್ನಟ್ಟಿದ ಜಾಗೃತ ಸಾರ್ವಜನಿಕರು ಅವರಲ್ಲಿ ಒಬ್ಬಾತನನ್ನು ಹಿಡಿಯುವಲ್ಲಿ ಯಶಸ್ವಿಯಾದರೂ, ಸಾರ್ವಜನಿಕರ ಹಲ್ಲೆಯಿಂದ ತೀವ್ರ ಗಾಯಗೊಂಡ ಆತ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಹೊರವಲಯಕ್ಕೆ ಹೊಂದಿಕೊಂಡಿರುವ ಹೆಗ್ಗನಹಳ್ಳಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಮೃತನನ್ನು ಚಾಲಕ ಹಾಗೂ ಕೊಡಗು ಜಿಲ್ಲೆಯ ಭಾಗಮಂಡಲಕ್ಕೆ ಸೇರಿದ ಉಮೇಶ (25) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.