ADVERTISEMENT

25 ವರ್ಷಗಳ ಹಿಂದೆ | ಉಗ್ರರ ನೆಲೆ ಧ್ವಂಸ: ದಾಳಿಗೆ 8 ಬಲಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 0:12 IST
Last Updated 3 ಜೂನ್ 2024, 0:12 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ಜೂನ್‌ 2: ಭಾರತೀಯ ಸೇನೆಯು ಕಾರ್ಗಿಲ್ ವಲಯದ ಬಟಾಲಿಕ್‌ ಉಪ ವಿಭಾಗದಲ್ಲಿ ಪಾಕಿಸ್ತಾನ ಬೆಂಬಲಿತ ಎಂಟು ಮಂದಿ ಅತಿಕ್ರಮಣಕಾರರನ್ನು ಹತ್ಯೆ ಮಾಡುವುದರೊಂದಿಗೆ ಮಹತ್ವದ ಬೆಳವಣಿಗೆ ಸಾಧಿಸಿದೆ. ಜತೆಗೆ ಇತರೆ ಐವರು ಉಗ್ರಗಾಮಿಗಳನ್ನು ತೀವ್ರವಾಗಿ ಗಾಯಗೊಳಿಸಿದೆ.

ಈ ನಡುವೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು
ನಡೆಸಿದ ಎರಡು ಹಂತಗಳ ತೀವ್ರ ಬಾಂಬ್‌ ದಾಳಿಯಲ್ಲಿ ಕಾರ್ಗಿಲ್‌ ವಲಯದ ಲ್ಲಿದ್ದ ಪಾಕಿಸ್ತಾನದ ಉಗ್ರಗಾಮಿಗಳ ಅಡಗುತಾಣಗಳು ಧ್ವಂಸವಾಗಿವೆ. 

‘ಬೇಹುಗಾರಿಕೆ ವೈಫಲ್ಯ’: ಜಾರ್ಜ್‌ ಕೈಬಿಡಲು ಪ್ರತಿಪಕ್ಷಗಳ ಆಗ್ರಹ 

ADVERTISEMENT

ನವದೆಹಲಿ, ಜೂನ್‌– 2: ತಮ್ಮ ವಿವಾದಾತ್ಮಕ ಹೇಳಿಕೆ ಗಳಿಂದ ಕಾರ್ಗಿಲ್‌ ಪರಿಸ್ಥಿತಿಯ ಬಗ್ಗೆ ದಿಕ್ಕು ತಪ್ಪಿಸಿ ದೇಶದ ಹಿತವನ್ನು ಕಡೆಗಣಿಸಿರುವ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರಿಂದ ರಕ್ಷಣಾ ಖಾತೆಯನ್ನು ವಾಪಸ್‌ ಪಡೆಯಬೇಕು ಎಂದು ಪ್ರಧಾನಿ ವಾಜಪೇಯಿ ಅವರನ್ನು ಸಿಪಿಐ ಆಗ್ರಹಪಡಿಸಿದೆ.

ಬೇಹುಗಾರಿಕೆ ವಿಫಲತೆಗೆ ಫರ್ನಾಂಡಿಸ್‌ ಅವರೇ ಹೊಣೆ ಹೊರಬೇಕು ಎಂದು ಸಿಪಿಐನ ಗುರುದಾಸ್‌ ದಾಸ್‌ಗುಪ್ತಾ ಹಾಗೂ ಜೆ. ಚಿತ್ತರಂಜನ್‌ ಅವರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.