ADVERTISEMENT

25 ವರ್ಷಗಳ ಹಿಂದೆ: ಸೇನಾ ಕಾರ್ಯಾಚರಣೆ: ಪ್ರಧಾನಿ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 19:27 IST
Last Updated 10 ಜುಲೈ 2024, 19:27 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಸೇನಾ ಕಾರ್ಯಾಚರಣೆ: ಪ್ರಧಾನಿ ಪ್ರಶಂಸೆ

ನವದೆಹಲಿ, ಜುಲೈ 10– ಪಾಕಿಸ್ತಾನಿ ಅತಿಕ್ರಮಣಕಾರರನ್ನು ಹೊರಗಟ್ಟುವ ಸೇನಾ ಕಾರ್ಯಾಚರಣೆ ತಿರುವಿನ ಹಂತ ಮುಟ್ಟಿದ್ದು ‘ಆಪರೇಷನ್ ವಿಜಯ್’ ನಿಜವಾಗಿಯೂ ದೇಶಕ್ಕೆ ವಿಜಯವನ್ನು ತಂದುಕೊಡುತ್ತಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಹರ್ಷ ವ್ಯಕ್ತಪಡಿಸಿದರು.

ಇಲ್ಲಿನ ಸೌತ್‌ ಬ್ಲಾಕ್‌ನಲ್ಲಿಯ ಸೇನಾ ಮುಖ್ಯ ಕಾರ್ಯಾಲಯದಲ್ಲಿ ಸೇನಾ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಗಿಲ್ ವಲಯದಲ್ಲಿ ಕೈಗೊಂಡಿರುವ ಭಾರತೀಯ ಸೇನೆಯ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ADVERTISEMENT

ಪಟೇಲ್–ಜಾರ್ಜ್‌ ರಹಸ್ಯ ಚರ್ಚೆ

ಬೆಂಗಳೂರು, ಜುಲೈ 10– ಕೇಂದ್ರ ರಕ್ಷಣಾ ಸಚಿವ, ಸಮತಾ ಪಕ್ಷದ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರು ಇಂದು ರಾತ್ರಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಶನಿವಾರ ರಾತ್ರಿ ದೆಹಲಿಯಿಂದ ನಗರಕ್ಕೆ ಆಗಮಿಸಿದ ಫರ್ನಾಂಡಿಸ್ ಅವರು ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ತೆರಳಿ ಪಟೇಲ್ ಅವರೊಂದಿಗೆ ಮೊದಲ ಸುತ್ತಿನ ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.