ADVERTISEMENT

25 ವರ್ಷಗಳ ಹಿಂದೆ: ‘ಸಚಿವ ಸ್ಥಾನ ಕೈತಪ್ಪಲು ಹೆಗಡೆ ಸ್ವಯಂಕೃತ ಅಪರಾಧ ಕಾರಣ’

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 21:51 IST
Last Updated 14 ಅಕ್ಟೋಬರ್ 2024, 21:51 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

‘ಸಚಿವ ಸ್ಥಾನ ಕೈತಪ್ಪಲು ಹೆಗಡೆ ಸ್ವಯಂಕೃತ ಅಪರಾಧ ಕಾರಣ’

ನವದೆಹಲಿ, ಅ. 14– ರಾಮಕೃಷ್ಣ ಹೆಗಡೆ ಅವರಿಗೆ ಈಗಿನ ಮಂತ್ರಿಮಂಡಲದಲ್ಲಿ ಅವಕಾಶ ಸಿಗದಿರಲು ಅವರ ‘ಕೆಲವು ಸ್ವಯಂಕೃತ ಅಪರಾಧಗಳು’ ಕಾರಣ ಎಂಬುದಾಗಿ ಜನತಾದಳ (ಯು) ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಜೆ.ಎಚ್‌. ಪಟೇಲ್ ನೇತೃತ್ವದ ಗುಂಪನ್ನು ತಂದು ಬಿಜೆಪಿ ಜತೆ ಮೈತ್ರಿ ಮಾಡಿಸಿದ್ದರಿಂದ ರಾಜ್ಯದಲ್ಲಿ ಪಕ್ಷವು ತನ್ನ ವರ್ಚಸ್ಸನ್ನು ಕಳೆದುಕೊಂಡಿತು ಮತ್ತು ಆಡಳಿತ ವಿರೋಧಿ ಅಲೆಯು ಬಿಜೆಪಿಯನ್ನು ಬಲಿ ತೆಗೆದುಕೊಂಡಿತು. ಆದ್ದರಿಂದ ರಾಮಕೃಷ್ಣ ಹೆಗಡೆ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬಾರದು ಎಂಬುದಾಗಿ ಕರ್ನಾಟಕದ ಕೆಲವು ಬಿಜೆಪಿ ನಾಯಕರು ಪ್ರಧಾನಮಂತ್ರಿ ಅವರಿಗೆ ದೂರು
ನೀಡಿದ್ದು ಒಂದು ಕಾರಣ ಎಂಬುದಾಗಿ ಗೊತ್ತಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.