ADVERTISEMENT

25 ವರ್ಷಗಳ ಹಿಂದೆ | 3ನೇ ಬಾರಿಗೆ ಅಟಲ್ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 0:11 IST
Last Updated 14 ಅಕ್ಟೋಬರ್ 2024, 0:11 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ಅ. 13– ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯಾಬಲ ನೀಡುವಲ್ಲಿ ವಿಫಲರಾದ ಜನತಾ ದಳ (ಯು) ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರನ್ನು ಹೊರತುಪಡಿಸಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಎಪ್ಪತ್ತು ಸದಸ್ಯರ ಮಂತ್ರಿಮಂಡಲ
ದೊಡನೆ ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.

ರಾಷ್ಟ್ರಪತಿ ಭವನದ ಮುಂಭಾಗದ ಹೊರಾಂಗಣದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಹೆಸರಿನ ಸಮ್ಮಿಶ್ರ ಸರ್ಕಾರದ ನೂತನ ಸಚಿವರಿಗೆ ರಾಷ್ಟ್ರಪತಿ
ಕೆ. ಆರ್. ನಾರಾಯಣನ್ ಪ್ರಮಾಣವಚನ ಬೋಧಿಸಿದರು.

ಕರ್ನಾಟಕದಿಂದ ಬಿಜೆಪಿಯ ಕೋಟಾದಲ್ಲಿ ಅನಂತ ಕುಮಾರ್ ಎರಡನೇ ಬಾರಿಗೆ ಮಂತ್ರಿಯಾಗಿ ಮುಂದುವರಿದರೆ, ಹದಿಮೂರು ದಿನಗಳ ಬಿಜೆಪಿ ಆಳ್ವಿಕೆಯಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದ ವಿ. ಧನಂಜಯ ಕುಮಾರ್ ಅವರು ಈ ಬಾರಿ ರಾಜ್ಯ ಮಟ್ಟದ ಸಚಿವರಾಗಿ ಅವಕಾಶ ಪಡೆದರು.

ADVERTISEMENT

ಪಾಕ್‌ನಲ್ಲಿ ಸೇನಾಡಳಿತ ಜಾರಿ

ಇಸ್ಲಾಮಾಬಾದ್, ಅ. 13 (ಪಿಟಿಐ, ಯುಎನ್‌ಐ)– ಪಾಕಿಸ್ತಾನದಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರು ದೇಶದಲ್ಲಿ ಸೇನಾಡಳಿತ ಜಾರಿ ಮಾಡಿರುವುದಾಗಿ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಅಲ್ಲದೆ ಎಲ್ಲ ನಾಲ್ಕು ಪ್ರಾಂತ್ಯಗಳ ಸರ್ಕಾರಗಳನ್ನೂ ವಜಾ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.