ADVERTISEMENT

25 ವರ್ಷಗಳ ಹಿಂದೆ: ರೋಷನ್ ಬೇಗ್, ಕಮರುಲ್ ಕಾಂಗ್ರೆಸ್‌ಗೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 22:57 IST
Last Updated 9 ಜುಲೈ 2024, 22:57 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಇನ್ನಷ್ಟು ಶಿಖರಗಳ ವಶ: ಅಂತಿಮ ಹಂತದಲ್ಲಿ ಆಪರೇಷನ್ ವಿಜಯ್

ನವದೆಹಲಿ, ಜುಲೈ 9– ಬಟಾಲಿಕ್ ವಲಯದಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳನ್ನು ಸಾಕಷ್ಟು ಸದೆಬಡಿದಿರುವ ಭಾರತೀಯ ಸೇನೆ ಶೇ 99ರಷ್ಟು ಪ್ರದೇಶಗಳನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪ್ರಮುಖ ಆಯಕಟ್ಟಿನ ಪ್ರದೇಶವಾದ ಬಟಾಲಿಕ್–ಯಲ್ದೂರ್ ಪ್ರದೇಶ
ಭಾರತೀಯ ಸೇನೆಯ ವಶವಾಗಿದ್ದು, ಅತಿಕ್ರಮಣಕಾರರನ್ನು ಸಂಪೂರ್ಣವಾಗಿ ಗಡಿಯಿಂದ ಹೊರಕ್ಕೆ ಹಾಕಲು ಕೆಲವೇ ಗಂಟೆಗಳ ಕಾರ್ಯಾಚರಣೆ ಸಾಕು ಎಂದು ಸೇನಾ ಮೂಲಗಳು ತಿಳಿಸಿವೆ.

ADVERTISEMENT

ರೋಷನ್ ಬೇಗ್, ಕಮರುಲ್ ಕಾಂಗ್ರೆಸ್‌ಗೆ

ನವದೆಹಲಿ, ಜುಲೈ 9– ನಿರೀಕ್ಷೆಯಂತೆ ಜನತಾದಳದ ಕರ್ನಾಟಕದ ಮಾಜಿ ಸಚಿವ ರೋಷನ್ ಬೇಗ್, ಲೋಕಸಭೆಯ ಮಾಜಿ ಸದಸ್ಯರಾದ ಕಮರುಲ್ ಇಸ್ಲಾಂ, ರಾಜಾ ರಂಗಪ್ಪ ನಾಯಕ ಮತ್ತು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಇಂದು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದರು.

ಈ ನಾಲ್ವರ ಸೇರ್ಪಡೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಇಂದು ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕೆಪಿಸಿಸಿ ಅಧ್ಯಕ್ಷ ಎಸ್.ಎಂ. ಕೃಷ್ಣ ಅವರ ಸಮ್ಮುಖದಲ್ಲಿ ಈ ನಾಲ್ವರು ಹಾಜರಿದ್ದು ಕಾಂಗ್ರೆಸ್ ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.