ಜನತಾದಳ ಪುನಶ್ಚೇತನಕ್ಕೆ ದೇವೇಗೌಡರ ಬಣ ಪಣ
ಬೆಂಗಳೂರು, ಜುಲೈ 23– ಒಳಸಂಚು, ಪಿತೂರಿಗಳಿಂದಾಗಿ ಇಬ್ಭಾಗವಾಗಿರುವ ಜನತಾದಳವನ್ನು ಮತ್ತೆ ಮೂಲ ಸಿದ್ಧಾಂತದ ಮೇಲೆ ಪುನಶ್ಚೇತನಗೊಳಿಸಿ ರಾಜ್ಯದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೆ ತರಬೇಕು ಎಂದು ದೇವೇಗೌಡರ ನೇತೃತ್ವದ ಬಣದ ಮುಖಂಡರು ಇಂದು ಇಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಪಣತೊಟ್ಟರು.
ಪಕ್ಷ ಇಬ್ಭಾಗವಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿಯ ವಿವಾದಾತ್ಮಕವಾದ ಜನತಾದಳದ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಎಚ್.ಡಿ. ದೇವೇಗೌಡ, ಎಸ್.ಆರ್. ಬೊಮ್ಮಾಯಿ, ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ, ಬಿ.ಟಿ. ಲಲಿತಾ ನಾಯಕ್, ಎಚ್.ಸಿ. ಮಹಾದೇವಪ್ಪ ಮುಂತಾದ ಮುಖಂಡರಲ್ಲಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಮತ್ತೆ ಪಕ್ಷವನ್ನು ಪುನರ್‌ಸಂಘಟಿಸಬೇಕು ಎಂಬ ಇಂಗಿತ ವ್ಯಕ್ತವಾಯಿತು.
ಪಟೇಲ್ ಜತೆ ಮೈತ್ರಿ ಇಲ್ಲ ರಾಜ್ಯ ಬಿಜೆಪಿ ಸಭೆ ನಿರ್ಧಾರ
ಬೆಂಗಳೂರು, ಜುಲೈ 23– ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನೇತೃತ್ವದ ಜನತಾ ದಳ ಜತೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳದೇ ಇರಲು ಇಂದು ಇಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಿರ್ಧರಿಸಿದೆ.
‘ಜನತೆಯಿಂದ ತಿರಸ್ಕೃತಗೊಂಡಿರುವ ಜನತಾ ದಳದ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ನಿರ್ಧಾರವನ್ನು ಪಕ್ಷದ ವರಿಷ್ಠರು ರಾಜ್ಯ ಘಟಕದ ಮೇಲೆ ಹೇರಬಾರದು ಎಂಬುದನ್ನು ಪಕ್ಷದ ವರಿಷ್ಠರು ರಾಜ್ಯ ಘಟಕದ ಮೇಲೆ ಹೇರಬಾರದು ಎಂಬುದು ಪಕ್ಷದ ಕಾರ್ಯಕರ್ತರ ಒಕ್ಕೋರಲಿನ ಒತ್ತಾಸೆಯಾಗಿದೆ. ಅಗತ್ಯ ಬಿದ್ದಲ್ಲಿ ಜನತೆಯ ಅಶೋತ್ತರಗಳಿಗೆ ಮನ್ನಣೆ ನೀಡಿ ಮುಂಬರುವ ಚುನಾವಣೆಯಲ್ಲಿ ಪಕ್ಷವು ಸ್ವಂತ ಶಕ್ತಿಯ ಮೇಲೆ ಸ್ಪರ್ಧಿಸಬೇಕು’ ಎಂದು ಸಭೆ ತೀರ್ಮಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.