ADVERTISEMENT

25 ವರ್ಷಗಳ ಹಿಂದೆ | ನಾಗರಹೊಳೆ: ಬೆಂಕಿ, ಬೇಟೆ, ರೋಗಕ್ಕೆ ಅಂಜಿದ ವನ್ಯಜೀವಿಗಳು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ನಾಗರಹೊಳೆ: ಬೆಂಕಿ, ಬೇಟೆ, ರೋಗಕ್ಕೆ ಅಂಜಿದ ವನ್ಯಜೀವಿಗಳು

ಬೆಂಗಳೂರು, ಅ. 4– ಅರಣ್ಯ ಇಲಾಖೆ ಅಕ್ಟೋಬರ್ 1ರಿಂದ 7ರವರೆಗೆ ‘ವನ್ಯಜೀವಿ ಸಪ್ತಾಹ’ ಆಚರಿಸುವ ಸಂಭ್ರಮದಲ್ಲಿದ್ದರೆ, ಪ್ರಸಿದ್ಧ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರವಾಗಿ ಕಳ್ಳಬೇಟೆ, ಮರಗಳ್ಳತನ, ಅಕ್ರಮವಾಗಿ ಅರಣ್ಯದಲ್ಲಿ ದನಗಳ ಮೇಯುವಿಕೆ, ಕಾಡಿನ ಬೆಂಕಿಯಿಂದ ತಮ್ಮನ್ನು ರಕ್ಷಿಸುವಂತೆ ಪ್ರಾಣಿಗಳು ಮೊರೆ ಇಡುವ ಸ್ಥಿತಿ ಇದೆ.

ಹಿಂದೆ ಈ ಎರಡು ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಹಳ್ಳಿಗಳ ದನಕರುಗಳು ಅರಣ್ಯದ ಅಂಚಿನಲ್ಲಿ ಮೇಯುತ್ತಿದ್ದವು. ಆದರೆ ಇಂದು ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಸುತ್ತಲಿನ ಹಳ್ಳಿಗಳ ಸಾವಿರಾರು ದನಕರುಗಳು ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ಬೇಗೂರು ವಲಯದಲ್ಲಿ ಬರುವ
ದೊಡ್ಡಬೈರನಕುಪ್ಪೆ ರಕ್ಷಿತ ಅರಣ್ಯದೊಳಗೆ ಹುಲ್ಲು ಮೇಯುತ್ತಿವೆ.

ADVERTISEMENT

ದಿನನಿತ್ಯ ಹಾಳಾಗುತ್ತಿರುವ ಅಗಾಧ ಪ್ರಮಾಣದ ಹುಲ್ಲು ಹಾಗೂ ಸೊಪ್ಪನ್ನು ಸಂರಕ್ಷಿಸಲು ಅರಣ್ಯ ಕಾವಲುಗಾರರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಪಟೇಲ್ ನೇತೃತ್ವದ ಸರ್ಕಾರದಿಂದ ಮತ್ತೆ ಮಹತ್ವದ ನಿರ್ಣಯಗಳು

ಬೆಂಗಳೂರು, ಅ. 4– ಹಣಕಾಸಿನ ಪರಿಣಾಮ ಉಂಟಾಗುವ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಬಾರ ದೆಂದು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಇಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದ್ದರೂ ಜೆ.ಎಚ್‌.ಪಟೇಲ್ ನೇತೃತ್ವದ ಸಚಿವ ಸಂಪುಟ ಇಂದು ಕೊನೆಯ ಬಾರಿಗೆ ಸಭೆ ಸೇರಿ ಹಣಕಾಸಿನ ವಿಷಯಗಳನ್ನು ಒಳಗೊಂಡ ಕೆಲವು ಮಹತ್ವದ
ನಿರ್ಧಾರಗಳನ್ನು ಕೈಗೊಂಡಿದೆ.

ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನಲ್ಲಿ ಹೇಮಾವತಿ ನದಿಗೆ ಕಟ್ಟಲಾಗಿರುವ ಶತಮಾನದಷ್ಟು
ಹಳೆಯದಾದ ಶ್ರೀ ರಾಮದೇವರ ನಾಲೆಯನ್ನು ಸುಮಾರು ₹33 ಕೋಟಿ ವೆಚ್ಚದಲ್ಲಿ
ಆಧುನೀಕರಣಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಆಡಳಿತಾತ್ಮಕ ಮಂಜೂರಾತಿ
ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.