ADVERTISEMENT

25 ವರ್ಷಗಳ ಹಿಂದೆ | ದೇಶದಾದ್ಯಂತ ಲಾರಿ ಮುಷ್ಕರ; ಸರಕು ಸಾಗಾಣಿಕೆ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 22:53 IST
Last Updated 21 ಅಕ್ಟೋಬರ್ 2024, 22:53 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ದೇಶದಾದ್ಯಂತ ಲಾರಿ ಮುಷ್ಕರ ಸರಕು ಸಾಗಾಣಿಕೆ ಅಸ್ತವ್ಯಸ್ತ

ನವದೆಹಲಿ, ಅ. 21 (ಯುಎನ್‌ಐ, ಪಿಟಿಐ)– ಡೀಸೆಲ್‌ ಬೆಲೆ ಏರಿಕೆಯನ್ನು ವಿರೋಧಿಸಿ ಅಖಿಲ ಭಾರತ ಲಾರಿ ಮಾಲೀಕರ ಒಕ್ಕೂಟವು ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ನೀಡಿದ ಕರೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶದಾದ್ಯಂತ ಸರಕು ಸಾಗಾಣಿಕೆ ಅಸ್ತವ್ಯಸ್ತವಾಗಿದೆ.

ಬಿಹಾರ ಮತ್ತು ಗುಜರಾತ್‌ ರಾಜ್ಯಗಳನ್ನು ಹೊರತುಪಡಿಸಿ ಕರ್ನಾಟಕವೂ ಸೇರಿದಂತೆ ಇತರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಸರಕು ಸಾಗಾಣಿಕೆ ವಾಹನಗಳು ರಸ್ತೆಯಿಂದ ಹೊರಗುಳಿದವು. ಒರಿಸ್ಸಾದಲ್ಲಿ ಲಾರಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಖಾಸಗಿ ಬಸ್‌ ಮಾಲೀಕರು ಕೂಡ ಇಂದು ಸಂಚಾರ ರದ್ದುಪಡಿಸಿದರು.

ADVERTISEMENT

ಬಳ್ಳಾರಿ ಅಭಿವೃದ್ಧಿಗೆ ರೂ. 3,300 ಕೋಟಿಯ ಯೋಜನೆ

ಬೆಂಗಳೂರು, ಅ. 21– ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಪರ್ಧಿಸಿದ್ದ ಬಳ್ಳಾರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ 3,300 ಕೋಟಿ ರೂಪಾಯಿಯ ವಿಶೇಷ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಇಂದು ಇಲ್ಲಿ ಪ್ರಕಟಿಸಿದೆ.

ಬಳ್ಳಾರಿ ಮತದಾರರು ಸೋನಿಯಾ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿದ್ದರ ಜತೆಗೆ ಅವರ ನಾಯಕತ್ವದ ವರ್ಚಸ್ಸಿನಿಂದಾಗಿ ರಾಜ್ಯದಲ್ಲಿ ಪಕ್ಷ ಪುನಃ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾಯಿತು, ಸೋನಿಯಾ ಬಯಕೆಯಂತೆ ತಾವು ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಕಟಿಸುತ್ತಿರುವುದಾಗಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.