ADVERTISEMENT

25 ವರ್ಷಗಳ ಹಿಂದೆ | ಬಿಜೆಪಿ ಸಭೆಯಲ್ಲಿ ಗದ್ದಲ, ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 0:01 IST
Last Updated 25 ಅಕ್ಟೋಬರ್ 2024, 0:01 IST
<div class="paragraphs"><p>25 ವರ್ಷಗಳ ಹಿಂದೆ..</p></div>

25 ವರ್ಷಗಳ ಹಿಂದೆ..

   

ಬೆಂಗಳೂರು, ಅ.24– ಬಿಜೆಪಿ ಕಾರ್ಯಕರ್ತ ರಿಂದ ಕಲ್ಲು ತೂರಾಟ, ಪಕ್ಷದ ಕಚೇರಿಗೆ ಮುತ್ತಿಗೆ, ಪೊಲೀಸರಿಂದ ಲಾಠೀ ಪ್ರಹಾರ... ಇಷ್ಟೆಲ್ಲಾ ಅವಾಂತರಗಳ ನಡುವೆಯೇ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಇಂದು ಆಯ್ಕೆಯಾದರು.

ಶೆಟ್ಟರ್‌ ಅವರು ಪಕ್ಷದ ಹಿರಿಯ ಮುಖಂಡ ಬಿ.ಬಿ ಶಿವಪ್ಪ ಅವರನ್ನು 32–11 ಮತಗಳಿಂದ ಪರಾಭವಗೊಳಿಸಿದರು. ಅನೇಕಲ್‌ ಶಾಸಕ ನಾರಾಯಣಸ್ವಾಮಿ ತಡವಾಗಿ ಬಂದಿದ್ದರಿಂದ ಮತದಾನದಲ್ಲಿ ಭಾಗವಹಿಸಲಿಲ್ಲ. ಶೆಟ್ಟರ್‌ ಅವರ ಆಯ್ಕೆಯ ಸುದ್ದಿ ತಿಳಿಯುತ್ತಲೇ ಪಕ್ಷದ ಕಚೇರಿಯ ಹೊರಗೆ ಭಾರಿ ಸಂಖ್ಯೆಯಲ್ಲಿ ಕಾದು ನಿಂತಿದ್ದ ಕಾರ್ಯಕರ್ತರು ಹಾಗೂ ಶಿವಪ್ಪ ಅವರ ಬೆಂಬಲಿಗರು ಆಕ್ರೋಶಗೊಂಡು ಬಿ.ಎಸ್‌.ಯಡಿಯೂರಪ್ಪ ಹಾಗೂ ಅನಂತ ಕುಮಾರ್‌ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಕಲ್ಲು ತೂರಾಟ ಆರಂಭಿಸಿದರು: ಕುರ್ಚಿಗಳನ್ನು ಎತ್ತೆಸೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.