ADVERTISEMENT

25 ವರ್ಷಗಳ ಹಿಂದೆ: ಶಕ್ತಿ ಪ್ರದರ್ಶಿಸಲು ಸಭೆ, ಸಮಾವೇಶಗಳ ರಾಜಕೀಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 0:27 IST
Last Updated 14 ಫೆಬ್ರುವರಿ 2024, 0:27 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಶಕ್ತಿ ಪ್ರದರ್ಶಿಸಲು ಸಭೆ, ಸಮಾವೇಶಗಳ ರಾಜಕೀಯ

ಬೆಂಗಳೂರು, ಫೆ. 13– ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಏಳೆಂಟು ತಿಂಗಳುಗಳು ಇರುವಾಗಲೇ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಪೂರ್ವಸಿದ್ಧತೆಯ ಮೊದಲ ಹಂತವಾಗಿ ‘ರ‍್ಯಾಲಿ ರಾಜಕೀಯ’ ಮಾಡುತ್ತಾ ಪಕ್ಷ ಹಾಗೂ ಜನ ಸಂಘಟನೆಯಲ್ಲಿ ತೊಡಗಿವೆ.

ಜನತಾದಳವು ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಕ್ಷದ ಅಧ್ಯಕ್ಷ ಪಟ್ಟ ಕಟ್ಟಿ ಚುನಾವಣಾ ಸೇನಾಧಿಪತಿಯನ್ನಾಗಿ ನೇಮಿಸಿದ್ದು, ಅವರ ಬೆನ್ನೆಲುಬಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಜೆ.ಎಚ್. ಪಟೇಲ್, ಹಿರಿಯ ನಾಯಕ ಎಸ್.ಆರ್. ಬೊಮ್ಮಾಯಿ, ಸಿ.ಎಂ. ಇಬ್ರಾಹಿಂ, ಸಚಿವ ಡಿ. ಮಂಜುನಾಥ್ ಇದ್ದಾರೆ.

ADVERTISEMENT

ಬಿಜೆಪಿಯು ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮುನ್ನಡೆದಿದ್ದು, ಅದರ ಬೆಂಬಲಕ್ಕೆ ಪ್ರಧಾನಿ ಎ.ಬಿ. ವಾಜಪೇಯಿ, ಗೃಹ ಸಚಿವ ಎಲ್‌.ಕೆ. ಅಡ್ವಾಣಿ, ರಾಜ್ಯದವರಾದ ಸಚಿವ ಅನಂತಕುಮಾರ್ ಹಾಗೂ ವೆಂಕಯ್ಯನಾಯ್ಡು ಇದ್ದಾರೆ.

ಲೋಕಶಕ್ತಿಗೆ ‘ಶಕ್ತಿ’ಯಾಗಿರುವ ಕೇಂದ್ರದ ವಾಣಿಜ್ಯ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಾರಥ್ಯದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.