ADVERTISEMENT

25 ವರ್ಷಗಳ ಹಿಂದೆ |ಪ್ರಾಣಿ ಪ್ರದರ್ಶನ ನಿಷೇಧ: ಸರ್ಕಸ್ ಕಂಪನಿಗಳಲ್ಲಿ ಕಂಪನ

​ಪ್ರಜಾವಾಣಿ ವಾರ್ತೆ
Published 23 ಮೇ 2024, 22:30 IST
Last Updated 23 ಮೇ 2024, 22:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಮೇ 23– ರಾಜ್ಯದ ವಿವಿಧ ಸರ್ಕಸ್ ತಂಡಗಳಲ್ಲಿರುವ 25 ಪ್ರಾಣಿಗಳ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ಐದು ಪ್ರಕಾರದ ಸರ್ಕಸ್ ಪ್ರಾಣಿಗಳ ಪ್ರದರ್ಶನ ವನ್ನು ನಿಷೇಧಿಸಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ಪ್ರಾಣಿಗಳ ಪುನರ್ವಸತಿಗೆ ಸ್ಪಷ್ಟ ಯೋಜನೆ ಇಲ್ಲದಿರುವುದೇ ಇದಕ್ಕೆ ಕಾರಣ.

ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಲ್ಲಿಸಿದ ಅರ್ಜಿಯನ್ನು ಎತ್ತಿಹಿಡಿದ ನ್ಯಾಯಾಲಯ, ಕಳೆದ ಡಿಸೆಂಬರ್‌ನಲ್ಲಿ (1998) ಹುಲಿ, ಸಿಂಹ, ಮಂಗ, ಚಿರತೆ ಮತ್ತು ಕರಡಿಗಳನ್ನು ಸರ್ಕಸ್‌ನಲ್ಲಿ ಬಳಸುವುದಕ್ಕೆ ನಿಷೇಧ ವಿಧಿಸಿತು.

ನಾಲ್ಕುನೂರರಷ್ಟಿದ್ದ ಈ ವರ್ಗದ ಪ್ರಾಣಿಗಳು ತಂಡಕ್ಕೆ ಆದಾಯ ತರುವುದನ್ನು ನಿಲ್ಲಿಸಿದ್ದು, ರಾಷ್ಟ್ರದಾದ್ಯಂತ ಇರುವ ಸುಮಾರು 64 ಸರ್ಕಸ್ ತಂಡಗಳಿಗೆ ಇವುಗಳ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ADVERTISEMENT

ನಂಜನಗೂಡಿನಲ್ಲಿ ಡಕಾಯಿತಿ ರೂ. 3 ಲಕ್ಷ ಲೂಟಿ

ನಂಜನಗೂಡು, ಮೇ 23– ಪಟ್ಟಣದ ಹೊರ ವಲಯದಲ್ಲಿ ಊಟಿ ರಸ್ತೆಯಲ್ಲಿನ, ನಿರ್ಮಾಣ ಹಂತದಲ್ಲಿರುವ ಶ್ರೀಪತಿ ಬಡಾವಣೆಯ ಮೇಲೆ ದಾಳಿ ನಡೆಸಿದ ನಾಲ್ವರು ಡಕಾಯಿತರ ತಂಡವೊಂದು, ಎರಡು ಮನೆಗಳಿಗೆ ನುಗ್ಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದೆ.

ಜಿಲ್ಲೆಯ ಹುಣಸೂರು ಭಾಗದಲ್ಲಿ ಕೆಲ ದಿನಗಳ ಹಿಂದೆ ನಡೆದ ಡಕಾಯಿತಿ ಮಾದರಿಯಲ್ಲೇ ಲೂಟಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.