ಪ್ರತಿಪಕ್ಷಗಳ ಸಭಾತ್ಯಾಗ ಮಧ್ಯೆ ವಿಮಾ ಮಸೂದೆ ಮಂಡನೆ
ನವದೆಹಲಿ, ಅ. 28– ಕೆಲವು ವರ್ಷಗಳಿಂದ ವಿವಾದಕ್ಕೆ ಸಿಕ್ಕಿ ನೆನೆಗುದಿಗೆ ಬಿದ್ದಿದ್ದ ವಿಮಾ ನಿಯಂತ್ರಣ ಪ್ರಾಧಿಕಾರ ಮತ್ತು ಅಭಿವೃದ್ಧಿ ಮಸೂದೆಯನ್ನು ಎಡ ಪಂಥೀಯ ಮತ್ತು ಇತರೆ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಮತ್ತು ಸಭಾತ್ಯಾಗದ ನಡುವೆ ಹಣಕಾಸು ಸಚಿವ ಯಶವಂತ್ ಸಿನ್ಹ ಇಂದು ಲೋಕಸಭೆಯಲ್ಲಿ ಮಂಡಿಸಿದರು.
ಇದರಿಂದಾಗಿ ಸರ್ಕಾರವು ಎರಡನೇ ಹಂತದ ಆರ್ಥಿಕ ಉದಾರೀಕರಣ ನೀತಿಯನ್ವಯ ವಿಮಾ ಕ್ಷೇತ್ರದಲ್ಲಿ ಖಾಸಗಿ ಒಡೆತನಕ್ಕೆ ಅವಕಾಶ ನೀಡುವ ಮಸೂದೆಯನ್ನು ಕೈಗೆತ್ತಿಕೊಂಡಿತು.
ರಾಜೀವ್ ಹಂತಕರಿಗೆ ರಾಜ್ಯಪಾಲರಿಂದ ಕ್ಷಮಾದಾನ ಇಲ್ಲ
ಚೆನ್ನೈ, ಅ. 28 (ಪಿಟಿಐ): ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ ಮರಣದಂಡನೆಗೆ ಒಳಗಾಗಿರುವ ಅಪರಾಧಿಗಳು ಸಲ್ಲಿಸಿರುವ ಕ್ಷಮಾಯಾಚನೆ ಅರ್ಜಿಯನ್ನು ತಮಿಳುನಾಡು ರಾಜ್ಯಪಾಲ ನ್ಯಾಯಮೂರ್ತಿ ಎಂ.ಫಾತೀಮಾ ಬೀವಿ ಅವರು ತಿರಸ್ಕರಿಸಿದ್ದಾರೆ.
ಶಿಕ್ಷೆಗೊಳಗಾಗಿರುವ ನಳಿನಿ ಮತ್ತು ಆಕೆಯ ಪತಿ ಮುರುಗನ್.ಪೆರಾರಿವಲನ್ ಮತ್ತು ಸಂತಾನ್ ಅವರು ಮನವಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.